ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿದ್ದ ಧನಂಜಯ್ ಅಭಿನಯದ ಚಿತ್ರ ಭೈರವಗೀತಾ. ರಾಮಗೋಪಾಲ್ ವರ್ಮಾ ನಿರ್ಮಾಣದ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಇದು ಅನಾವರಣಗೊಂಡ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಅದೇ ಸುದ್ದಿ. ಡಾಲಿ ಅಭಿಮಾನಿಗಳ ಪಾಲಿಗಿದು ಅನಿರೀಕ್ಷಿತ ಸುಗ್ಗಿ. ಈ ಟ್ರೈಲರ್ ಕಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಖುಷಿಗೊಂಡಿದ್ದಾರೆ. ಡಾಲಿಯ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.
ಭೈರವ ಗೀತಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಘಂಟೆ ಕಳೆಯೋದರೊಳಗೆ ದರ್ಶನ್ ಅವರು ಅದನ್ನು ವೀಕ್ಷಿಸಿದ್ದಾರೆ. ನಂತರ ಕೂಡಲೇ ಟ್ವೀಟ್ ಮೂಲಕ ಭೈರವ ಗೀತಾ ಟ್ರೈಲರ್ ಸೂಪರ್ ಅಂತ ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಧನಂಜಯ್ ಧನ್ಯವಾದವನ್ನೂ ಹೇಳಿದ್ದಾರೆ.
ಭೈರವಗೀತಾ ಟ್ರೈಲರ್ ನಿರೀಕ್ಷೆಯಂತೆಯೇ ಸೌಂಡು ಮಾಡಿದೆ. ಟಗರು ಚಿತ್ರದಲ್ಲಿ ಧನಂಜಯ ಮಾಡಿದ್ದ ಡಾಲಿ ಪಾತ್ರದ ಖದರ್ ಇತ್ತಲ್ಲಾ? ಅದನ್ನೇ ಬಸಿದುಕೊಂಡಂತೆ ಈ ಚಿತ್ರದ ಪಾತ್ರ ಮೂಡಿ ಬಂದಿದೆ. ಒಂದು ಪ್ರೇಮಕಥಾನಕ, ಅದಕ್ಕಾಗಿ ನಡೆಯೋ ಗ್ಯಾಂಗ್ವಾರ್ ಸುತ್ತಾ ಈ ಚಿತ್ರದ ಕಥೆ ಹೊಂದಿರೋ ಲಕ್ಷಣಗಳನ್ನೂ ಟ್ರೈಲರ್ ಜಾಹೀರು ಮಾಡಿದೆ.
ಬಿಡುಗಡೆಯಾಗಿ ಗಂಟೆ ಕಳೆಯುವಷ್ಟರಲ್ಲಿಯೇ ಲಕ್ಷ ಲಕ್ಷ ವೀಕ್ಷಣೆ ಪಡೆದಿರೋ ಈ ಟ್ರೈಲರ್ ಡಾಲಿಯ ಹವಾ ಮತ್ತೆ ಸೃಷ್ಟಿಯಾಗೋ ಸೂಚನೆಗಳನ್ನೂ ನಿಚ್ಚಳವಾಗಿಸಿದೆ. ಸ್ಯಾಂಡಲ್ವುಡ್ನ ನಟ ನಟಿಯರೊಂದಷ್ಟು ಮಂದಿ ಇದನ್ನು ಮೆಚ್ಚಿಕೊಂಡಿದ್ದಾರೆ. ಆದರೆ ದರ್ಶನ್ ಅವರು ಮಾತ್ರ ಒತ್ತಡದ ನಡುವೆಯೂ ಟ್ರೈಲರ್ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಡಾಲಿ ಧನಂಜಯ್ ದರ್ಶನ್ ನಟಿಸಿರೋ ಯಜಮಾನ ಚಿತ್ರದಲ್ಲಿಯೂ ಒಂದು ವಿಲನ್ ರೋಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಯಜಮಾನ ಚಿತ್ರದ ಆಸುಪಾಸಿನಲ್ಲಿಯೇ ಭೈರವಗೀತಾ ಕೂಡಾ ದರ್ಶನ ಕೊಡಲಿದ್ದಾರೆ!
#
No Comment! Be the first one.