ರಜನಿ ಕಾಂತ್ ಗೆ ಯಾವ ಗೆಟಪ್ ಕೊಟ್ಟರೂ ಸೂಪರ್ರೋ ಸೂಪರ್ರು. ಪಾತ್ರಗಳಿಗೆ ತನ್ನನ್ನು ಅರ್ಪಿಸಿಕೊಂಡು ಪಾತ್ರವೇ ನಾಚುವಂತೆ ಮಾಡುವ ಅಮೋಘ ಅಭಿನಯ ತೋರುವ ರಜನಿಕಾಂತ್ ಅವರ ನಟನೆ ಎಂತಹವರನ್ನು ಬೆರಗಾಗಿಸುತ್ತದೆ. ಪೆಟ್ಟಾ ಚಿತ್ರದ ಯಶಸ್ಸಿನ ನಂತರ ರಜನಿಕಾಂತ್ ಎ.ಆರ್. ಮುರುಗದಾಸ್ ಜತೆಗೆ ದರ್ಬಾರ್ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಈ ಚಿತ್ರದಲ್ಲಿ ರಜನಿ ಪೊಲೀಸ್ ಕಾಪ್ ಆಗಿ ಮಿಂಚಲಿದ್ದಾರೆ. ಈಗಾಗಲೇ ಎರಡು ಹಂತರದ ಶೂಟಿಂಗನ್ನು ಮುಗಿಸಿಕೊಂಡಿರುವ ಚಿತ್ರತಂಡ ಸದ್ಯ ಮೂರನೇ ಹಂತದ ಶೂಟಿಂಗ್ ಗಾಗಿ ಮುಂಬೈನಲ್ಲಿ ಬೀಡುಬಿಟ್ಟಿದೆ.
ಇತ್ತೀಚಿಗೆ ದರ್ಬಾರ್ ನ ಎರಡು ಹೊಸ ಪೋಸ್ಟರ್ ಗಳು ಸಖತ್ ಸ್ಟೈಲಿಶ್ ಆಗಿದ್ದು, ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ಟಾಪ್ ನಲ್ಲಿತ್ತು. ಇನ್ನು ರಜನಿಗೆ ಲೇಡಿ ಸೂಪರ್ ಸ್ಟಾರ್ ನಯನತಾರ ನಾಯಕಿಯಾಗಿದ್ದು, ನವಾಬ್ ಶಾ, ಸುನೀಲ್ ಶೆಟ್ಟಿ ಮತ್ತು ಪ್ರತೀಕ್ ಬಬ್ಬರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ರಜನಿಕಾಂತ್ ದರ್ಬಾರ್ ನಲ್ಲಿ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಲೈಕಾ ಪ್ರೊಡಕ್ಷನ್ ನಲ್ಲಿ ದರ್ಬಾರ್ ನಿರ್ಮಾಣವಾಗುತ್ತಿದೆ.
Comments