ದರ್ಶನ್ ಅಭಿಮಾನಿಗಳ ಪಾಲಿಗೆ ಈ ವರ್ಷ ಎಂದಿಗಿಂತಲೂ ವಿಶೇಷ. ಒಂದರ ಹಿಂದೊಂದರಂತೆ ಚಾಲೆಂಜಿಂಗ್ ಸ್ಟಾರ್ ಚಿತ್ರಗಳು ಬಿಡುಗಡೆಗೆ ತಯಾರಾಗಿರುವಾಗಲೇ ಮತ್ತೊಂದಷ್ಟು ಹೊಸಾ ಸಿನಿಮಾಗಳ ವಿವರಗಳೂ ಹೊರ ಬೀಳುತ್ತಿವೆ. ಇತ್ತ ಕುರುಕ್ಷೇತ್ರ ಮತ್ತು ಯಜಮಾನ ಚಿತ್ರಗಳಲ್ಲಿ ಯಾವುದು ಐವತ್ತೊಂದನೇ ಚಿತ್ರವಾಗುತ್ತೆ ಅನ್ನೋ ಚರ್ಚೆಗಳು ನಡೆಯುತ್ತಿರುವಾಗಲೇ ಐವತೈದನೇ ಸಿನಿಮಾದ ಟೈಟಲ್ ಹೊರ ಬಿದ್ದಿದೆ!
ದರ್ಶನ್ ಅವರ ಐವತ್ತೆರಡನೇ ಚಿತ್ರ ಒಡೆಯ. ಇನ್ನುಳಿದಂತೆ ರಾಬರ್ಟ್ ಐವತ್ಮೂರನೆಯದ್ದಾದರೆ ಗಂಡುಗಲಿ ಮದಕರಿ ನಾಯಕ ಐವತ್ತ ನಾಲಕ್ಕನೇ ಚಿತ್ರ. ಹೀಗಿರುವಾಗಲೇ ದರ್ಶನ್ ಐವತೈದನೇ ಸಿನಿಮಾಕ್ಕೆ ಪಾಶುಪತಾಸ್ತ್ರ ಎಂಬ ಟೈಟಲ್ ಫಿಕ್ಸಾಗಿದೆ!
ಈ ಚಿತ್ರವನ್ನ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿರುವವರು ಯಾರು ಅನ್ನೋದರಿಂದ ಹಿಡಿದು ಉಳಿಕೆ ವಿವರಗಳೆಲ್ಲವೂ ದರ್ಶನ್ ಹುಟ್ಟುಹಬ್ಬದಂದು ಜಾಹೀರಾಗಲಿದೆಯಂತೆ. ಆದರೆ ಪಾಶುಪತಾಸ್ತ್ರದಲ್ಲಿ ದರ್ಶನ್ ವಿಶಿಷ್ಟವಾದ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದಂತೂ ಪಕ್ಕಾ. ಇದೊಂದು ಪೊಲಿಟಿಕಲ್ ಬೇಸ್ಡ್ ಕಥೆ ಹೊಂದಿರೋ ಸಿನಿಮಾವಂತೆ. ಈಗ ಹೊರ ಬಿದ್ದಿರೋ ಇಷ್ಟೇ ವಿಚಾರಗಳು ದರ್ಶನ್ ಅಭಿಮಾನಿ ಪಡೆಯನ್ನ ಖುಷಿಗೊಳಿಸಿದೆ.
#