ಡಬ್ಲೂಡಬ್ಲೂಎಫ್ ಸೂಪರ್ಸ್ಟಾರ್ ದಿ ಗ್ರೇಟ್ ಖಲಿ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ಜಯಂತ್ ಸಿ.ಪರಾಂಜಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ’ನರೇಂದ್ರ’ ತೆಲುಗು ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ಪಾತ್ರ ನಿರ್ವಹಿಸಲಿದ್ದಾರೆ. ನೀಲೇಶ್ ಮತ್ತು ಇಸಾಬೆಲ್ಲಾ ಪ್ರಮುಖ ಪಾತ್ರದಲ್ಲಿರುವ ಇದೊಂದು ಬಾಕ್ಸಿಂಗ್ ಡ್ರಾಮಾ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಶೆಡ್ಯೂಲ್ನಲ್ಲಿ ಖಲಿ ಕ್ಯಾಮೆರಾ ಎದುರಿಸಲಿದ್ದಾರೆ.
ವೃತ್ತಿಪರ ಡಬ್ಲೂಡಬ್ಲೂಎಫ್ ಸ್ಟಾರ್ ದಿ ಗ್ರೇಟ್ ಖಲಿ ಈ ಮೊದಲು ’ದಿ ಲಾಂಗೆಸ್ಟ್ ಯಾರ್ಡ್’ ಇಂಗ್ಲಿಷ್ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ್ದರು. ’ಗೆಟ್ ಸ್ಮಾರ್ಟ್’, ’ಮ್ಯಾಕ್ಗ್ರೂಬರ್’, ’ಕುಸ್ತಿ’ ಮತ್ತು ’ರಾಮಾ: ದಿ ಸೇವಿಯರ್’ ಖಲಿ ಅಭಿನಯಿಸಿರುವ ಇತರೆ ಚಿತ್ರಗಳು. ಜನಪ್ರಿಯ ಹಿಂದಿ ಬಿಗ್ಬಾಸ್ ರಿಯಾಲಿಟಿ ಶೋನ ೪ನೇ ಸೀಸನ್ ಸ್ಪರ್ಧಿಯಾಗಿಯೂ ಅವರು ಕಾಣಿಸಿಕೊಂಡಿದ್ದರು. ಇಶಾನ್ ಎಂಟರ್ಟೈನ್ಮೆಂಟ್ಸ್ ನಿರ್ಮಿಸುತ್ತಿರುವ ’ನರೇಂದ್ರ’ ಚಿತ್ರದೊಂದಿಗೆ ಖಲಿ ದಕ್ಷಿಣ ಭಾರತದ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
#
No Comment! Be the first one.