ವಿಪರೀತವಾಗಿ ರೇಗಿಸಿ, ತೆಪ್ಪಗಿದ್ದವರನ್ನು ಪದೇ ಪದೇ ಕೆರೆದರೆ ಎಂತವರಿಗಾದರೂ ಪಿತ್ತ ನೆತ್ತಿಗೇರದೇ ಇರೋದಿಲ್ಲ. ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ವಿಚಾರದಲ್ಲೂ ಆಗಿದ್ದು ಇದೇ.. ಸೆಲೆಬ್ರಿಟಿಗಳು ಅಂದಮೇಲೆ ಟ್ರೋಲ್ಗಳಾಗೋದು, ವಿಭಿನ್ನ ರೀತಿಯಲ್ಲಿ ಕಮೆಂಟ್ ಹಾಕೋದು, ಕೆಲವು ಸಲ ಅವಹೇಳನ ಮಾಡಿ ಮಾತನಾಡೋದೆಲ್ಲಾ ಸಿನಿಮಾ ರಂಗದಲ್ಲಿ ಮಾಮೂಲು.. ಹಾಗಂತ ಅನ್ನೋದನ್ನೆಲ್ಲಾ ಸಹಿಸಿಕೊಳ್ಳಬೇಕು ಅಂತೇನು ನಿಯಮ ಇಲ್ಲವಲ್ಲಾ? ಹೀಗೇ, ಸಾಮಾಜಿಕ ಜಾಲತಾಣಗಳಲ್ಲಿ ನಟಿ ಡಿಪ್ಪಿಯ ವಿರುದ್ಧ ಸಿಕ್ಕಾಪಟ್ಟೆ ಕಮೆಂಟ್ಸ್ ಮತ್ತು ಕೆಟ್ಟಾ ಕೊಳಕು ಮಾತನಾಡೋಕೆ ಶುರು ಮಾಡಿದ್ದಾರೆ. ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡಿದ್ದ ಡಿಪ್ಪಿ, ಈಗ ತಮ್ಮ ಸಿಟ್ಟನ್ನ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದ ಸಂದೇಶವನ್ನ ಸ್ಕ್ರೀನ್ ಶಾಟ್ ತೆಗೆದುಕೊಂಡ ದೀಪಿಕಾ, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿ ಟ್ರೋಲಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಕಮೆಂಟ್ ಮಾಡಿರೋ ಬಗ್ಗೆ ನಿಮ್ಮ ಕುಟುಂಬ ಮತ್ತೆ ಫ್ರೆಂಡ್ಸ್ ಗ್ರೂಪ್ ಹೆಮ್ಮೆಪಡಬೇಕು ಆ ರೀತಿ ಕಮೆಂಟ್ ಹಾಕಿದ್ದೀರ ಅಂತ ವ್ಯಂಗ್ಯ ಮಾಡಿದ್ದಾರೆ. ಆ ನಂತರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೇ ಡಿಸೆಂಬರ್ 31 ರಂದು ಹಾಕಿದ್ದ ಎಲ್ಲಾ ಪೋಸ್ಟರ್ಗಳನ್ನು ಡಿಲೀಟ್ ಮಾಡಿದ್ದು, ಈಗ ಕಾಮಿಡಿ ಇರುವಂತದ್ದೂ, ಜೊತೆಗೆ ಆಸಕ್ತಿ ಹುಟ್ಟಿಸುವಂತಹ ವಿಷಯಗಳನ್ನ ಪೋಸ್ಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ, ಅವರು ತಮ್ಮ ಶಾಲೆಯ ಸ್ನೇಹಿತ ಹಿತೇಶಿ ಮೆಹ್ತಾ ಅವರೊಂದಿಗೆ ಮೋಜಿನ ವೀಡಿಯೊವನ್ನು ಶೇರ್ ಮಾಡಿದ್ದರು. ಇದರಲ್ಲಿ ಅವರಿಬ್ಬರು ಬ್ರೇಕ್ ಅಪ್ ಚಾಲೆಂಜ್ನಲ್ಲಿ ಭಾಗವಹಿಸಿದ್ದರು. ಆ ವಿಡಿಯೋದಲ್ಲಿ ಸ್ಕೂಲ್ ಫ್ರೆಂಡ್ ಹಿತೇಶಿ, ದೀಪಿಕಾ ಅವರ ಜೀವನದ ಬಗ್ಗೆ ಹಲವು ವಿಷಯಗಳನ್ನ ಬಹಿರಂಗಪಡಿಸಿದ್ದರು.
ಹರ್ಷವರ್ಧನ
No Comment! Be the first one.