ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನಗಳು ಕಳೆಯುತ್ತಿದ್ದಂತೆ ಕೇಳೋ ಪ್ರಶ್ನೆ ಏನಾದ್ರೂ ಗುಡ್ ನ್ಯೂಸು.. ಅಂತಾನೇ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಅತಿಯಾಗಿರುತ್ತಾರೆ. ಯಾವುದೇ ಸಿನಿಮಾ ಪ್ರೆಸ್ ಮೀಟ್ ಗಳಿಗೆ ಹೋದರೂ ಸೆಲೆಬ್ರೆಟಿಗಳಿಗೆ ಮುಜುಗರವಾಗುವಂತಹ ಪರ್ಸನಲ್ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಸಾಕಷ್ಟು ಬಾರಿ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸುವ ಸೆಲೆಬ್ರೆಟಿಗಳು ಮತ್ತೂ ಕೆಲವು ಬಾರಿ ನಕ್ಕು ಸುಮ್ಮನಾಗುತ್ತಾರೆ.
ಸದ್ಯ ಬಾಲಿವುಡ್ ನಲ್ಲಿ ರಣಬೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಇಂತಹ ಪ್ರಶ್ನೆಗಳಿಂದ ಬೇಸತ್ತಿದೆ. ದೀಪಿಕಾ ಪಡುಕೋಣೆಯಂತೂ ಪ್ರಶ್ನೆ ಕೇಳಿದವರಿಗೆ ತರಾಟೆಗೂ ತೆಗೆದುಕೊಳ್ಳುತ್ತಲೇ ಇದ್ದರೂ ಬಿಟ್ಟೂ ಬಿಡದೇ ಕಾಡುವ ಮಂದಿ ಈಗ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರೆಂಬ ವದಂತಿಯನ್ನೇ ಹಬ್ಬಿಸಿಬಿಟ್ಟಿದ್ದಾರೆ. ಯೆಸ್.. ಇತ್ತೀಚಿಗೆ ದೀಪಿಕಾ ಮತ್ತು ರಣವೀರ್ ಜತೆಯಾಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದರು. ಸಾಮಾನ್ಯವಾಗಿ ಬಾಡಿ ಹಗ್ ಉಡುಪುಗಳನ್ನು ಧರಿಸುವ ದೀಪಿಕಾ ಈ ಪೋಟೋದಲ್ಲಿ ಸಡಿಲವಾಗಿರುವ ಉಡುಪು ಧರಿಸಿದ್ದಾರೆ. ಇದನ್ನೇ ಎಳೆಯಾಗಿಟ್ಟುಕೊಂಡು ಪೋಸ್ಟೊಂದನ್ನು ಮಾಡಿರುವ ಡಿಪ್ಪಿ ಅಭಿಮಾನಿ ಆಕೆಯ ಬೇಬಿ ಬಂಪ್ ಕಾಣಿಸುತ್ತಿದೆ ಎಂದೂ ಬರೆದುಕೊಂಡಿದ್ದಾರೆ. ಈ ಫೋಟೋವನ್ನು ನೋಡಿರುವ ಸಾಕಷ್ಟು ಮಂದಿ ದಿಪ್ಪಿ ಪ್ರೆಗ್ನೆಂಟ್ ಆಗಿದ್ದರೂ ಹೈಡ್ ಮಾಡುತ್ತಿದ್ದಾರೆಯೇ ಎಂತೆಲ್ಲ ಕಮೆಂಟ್ ಮಾಡಿದ್ದಾರೆ. ಆದರೆ ಯಾವುದಕ್ಕೂ ದೀಪಿಕಾ ಪಡುಕೋಣೆ ತುಟಿ ಬಿಚ್ಚಿಲ್ಲ.