ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಸೀಜನ್ 5 ಮನೆಯನ್ನು ಪ್ರವೇಶಿಸಿ, ಸ್ವ ಪ್ರಯತ್ನದಿಂದ ಫಿನಾಲೆಯಲ್ಲಿ ರನ್ನರ್ ಅಪ್ ಆದ ದಿವಾಕರ್ ನ ಜೀವನ ಬಿಗ್ ಬಾಸ್ ನಿಂದ ಹೊರಬಂದ ಮೇಲಷ್ಟೇ ಬದಲಾದದ್ದು. ಅಲ್ಲಿಯವರೆಗೂ ಮಸಾಜ್ ಎಣ್ಣೆಯನ್ನು ಮಾರುತ್ತಿದ್ದ ದಿವಾಕರ್, ನಂತರ ಬಣ್ಣದ ಲೋಕಕ್ಕೆ ಪ್ರವೇಶಿಸಿ ಸೈ ಎನ್ನಿಸಿಕೊಂಡರು. ರೇಸ್ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆಯನ್ನು ಮಾಡಿದ್ದ ದಿವಾಕರ್, ಸದ್ಯ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ದಿವಾಕರ್ ನಟನೆಯ ರೇಸ್ ಸಿನಿಮಾ ಬಿಡುಗಡೆಗೂ ರೆಡಿಯಾಗಿದೆ. ಇನ್ನೂ ಆ ಸಿನಿಮಾ ರಿಲೀಸ್ ಆಗುವ ಮುನ್ನವೇ ದಿವಾಕರ್ ಗೆ ಮತ್ತೊಂದು ಸಿನಿಮಾ ಆಫರ್ ಬಂದಿದೆ.
ಇತ್ತೀಚೆಗೆ ನಗರದ ಹೊರವಲಯದಲ್ಲಿರುವ ಲಕ್ಷ್ಮೀ ಪುರದ ಸಾಯಿಬಾಬಾ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಲಾಯಿತು. ಚಿತ್ರದ ಮುಖ್ಯ ಪಾತ್ರದಲ್ಲಿ ದಿವಾಕರ್ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ನೇತ್ರಾ ನಟಿಸುತ್ತಿದ್ದಾರೆ. ಜೊತೆಗೆ ತಬಲ ನಾಣಿ, ಮೋಹನ್ ಜುನೇಜ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಧನಂಜಯ್ ಎಚ್ ಹಾಗೂ ಗೋಪಾಲಕೃಷ್ಣ ಹವಾಲ್ದಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ‘ನನ್ನ ನಿನ್ನ ಪ್ರೇಮ ಕಥೆ’, ‘ಕೃಷ್ಣ ತೀರ’ ಸಿನಿಮಾಗಳನ್ನು ನಿರ್ದೇಶಿರುವ ಶಿವು ಜಮಖಂಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
No Comment! Be the first one.