ಒಂದು ಕಡೆ ರುಸ್ತುಂ ಹಾಗೂ ಆಪರೇಷನ್ ಮುಗಿಸಿ ರಿಲೀಫ್ ಆಗಿರುವ ಶಿವರಾಜ್ ಕುಮಾರ್ ಅಭಿನಯದ ದ್ರೋಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೆಸರಿಗೆ ತಕ್ಕಂತೆ ನಾಯಕ ಚಿತ್ರದಲ್ಲಿ ಓರ್ವ ಶಿಕ್ಷಕನಾಗಿದ್ದು, ಸದ್ಯ ಸಮಾಜದಲ್ಲಾಗುವ ಶೈಕ್ಷಣಿಕ ವ್ಯಾಪಾರವನ್ನು ವಿರೋಧಿಸಿ ಅದರ ವಿರುದ್ಧ ಸೆಟೆದು ನಿಲ್ಲುವ ಕಥೆಯನ್ನು ದ್ರೋಣ ಒಳಗೊಂಡಿದೆ.

‘ರುಸ್ತುಂ’ ಚಿತ್ರದ ಬಳಿಕ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ‘ದ್ರೋಣ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮೋಡಿ ಮಾಡುತ್ತಿದೆ. ಹೆಸರಿಗೆ ತಕ್ಕಂತೆ ಚಿತ್ರದ ನಾಯಕ ದ್ರೋಣ ಓರ್ವ ಸಾಮಾಜಿಕ ಕಳಕಳಿಯ ಶಿಕ್ಷಕನಾಗಿದ್ದು, ಅವನು ಶೈಕ್ಷಣಿಕ ಅವ್ಯವಸ್ಥೆಯನ್ನು ವಿರೋಧಿಸಿ ಅದರ ವಿರುದ್ದ ಬಾಣ ಬಿಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇನ್ನು ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಎನ್ನುವ ಸರ್ಕಾರದ ಧೋರಣೆ.. ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳು ಓದಿದರೆ ಎಲ್ಲಿ ತಮ್ಮ ಸ್ಟೇಟಸ್ ಕಡಿಮೆಯಾಗುತ್ತದೆ ಎಂಬ ಅಜ್ಞಾನದಲ್ಲಿ ಬದುಕುತ್ತಿರುವ ದುರಂತದ ಸ್ಥಿತಿಯ ಮೇಲೆಯೇ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಈ ಮೂಲಕ ಶಿವರಾಜ್ ಕುಮಾರ್ ದ್ರೋಣನಾಗಿ ಅದಾವ ಮೆಸೇಜ್ ಕೊಡಲು ಹೊರಟಿದ್ದಾರೋ ನೋಡಬೇಕು.  ಶಿವರಾಜ್ ಕುಮಾರ್ ಗೆ ಜತೆಯಾಗಿ ಇನಿಯಾ ನಟಿಸಿದ್ದು, ಉಳಿದಂತೆ ಸ್ವಾತಿ ಶರ್ಮ,

ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿಗೌಡ, ಶ್ರೀನಿವಾಸ ಗೌಡ, ಆನಂದ್, ನಾರಾಯಣ ಸ್ವಾಮಿ, ವಿಜಯ್, ಜಯಶ್ರೀ ಕೃಷ್ಣನ್, ಮಾಸ್ಟರ್ ಮಹೇಂದ್ರ ಹಾಗೂ ರವಿಕಿಶನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಪ್ರಮೋದ್ ಚಕ್ರವರ್ತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಮಹದೇವಪ್ಪ ಹಳಗಟ್ಟಿ ನಿರ್ಮಾಣ ಮಾಡಿದ್ದಾರೆ.

CG ARUN

೦%ಲವ್ – ಅಂದು ಅರ್ಧನಾರೀಶ್ವರ.. ಇಂದು?

Previous article

ಸರಿಲೇರು ನಿಕೇವರು ಟೈಟಲ್ ಸಾಂಗ್ ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *