ಮಹರ್ಷಿ ಯಶಸ್ಸಿನ ನಂತರ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸುತ್ತಿರುವ ಹೊಸ ಸಿನಿಮಾ ಸರಿಲೇರು ನಿಕೇವರು. ಈ ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿ ಮಹೇಶ್ ಬಾಬು ನಟಿಸಿದ್ದು, ಇಂದು ಸ್ವಾತಂತ್ರ್ಯ ದಿನಾಚರಣೆಯ ಗೌರವಾರ್ಥವಾಗಿ ಚಿತ್ರದ ಟೈಟಲ್ ಸಾಂಗನ್ನು ಚಿತ್ರತಂಡ ಅನಾವರಣಗೊಳಿಸಿದೆ. ಅಲ್ಲದೇ ಈ ಹಾಡಿನ ಮೂಲಕ ಭಾರತೀಯ ಸೇನೆಗೆ ಗೌರವವನ್ನು ಸಲ್ಲಿಸಿದೆ.
ಈ ಟೈಟಲ್ ಸಾಂಗ್ ನಲ್ಲಿ ಪ್ರಿನ್ಸ್ ಮಹೇಶ್ ಬಾಬು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸೇನೆಯ ಸಮವಸ್ತ್ರ, ಬುಲೆಟ್ ಪ್ರೂಫ್ ಜಾಕೆಟ್ ನಿಂದ ಫುಲ್ ಮಿಂಚಿದ್ದಾರೆ. ಟೈಟಲ್ ಹಾಡಿನಲ್ಲಿ ಇಂಡೋ ಪಾಕಿಸ್ತಾನ ಯುದ್ಧ, ಕಾರ್ಗಿಲ್ ಯುದ್ಧ, ಉರಿ ಸರ್ಜಿಕಲ್ ಸ್ಟ್ರೈಕ್ ನ ಕೆಲ ತುಣುಕುಗಳೊಂದಿಗೆ ಭಾರತೀಯ ಸೇನೆಯ ಅಟ್ಟಹಾಸವನ್ನು ತೋರಿಸಲಾಗಿದೆ. ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದು, ಪ್ರಿನ್ಸ್ ಮಹೇಶ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಜತೆಯಾಗಿದ್ದಾರೆ. ಚಿತ್ರೀಕರಣ ಸದ್ದಿಲ್ಲದೇ ಸಾಗುತ್ತಿದ್ದು, 2020 ರ ಸಂಕ್ರಾತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
No Comment! Be the first one.