ಸಿನಿಮಾ ರಿಲೀಸ್ ಗೂ ಮುನ್ನವೇ ನಿರೀಕ್ಷೆಗೂ ಮೀರಿ ಮಾರ್ಕೆಟ್ ಮಾಡುವ ಬುದ್ದಿವಂತ ನಿರ್ದೇಶಕರ ಪೈಕಿ ಜೋಗಿ ಪ್ರೇಮ್ ಪ್ರಥಮ ಸ್ಥಾನದಲ್ಲಿರುತ್ತಾರೆ. ಸಿನಿಮಾ ಹೇಗಾದರೂ ಇರಲಿ.. ಬಿಡಲಿ.. ಆದರೆ ಬಂಡವಾಳ ಹೂಡಿದ ನಿರ್ಮಾಪಕರಿಗಂತೂ ಪ್ರೇಮ್ ಮೋಸವಾಗದಂತೆ ನೋಡಿಕೊಳ್ಳುತ್ತಾರೆ ಎಂಬುದು ಪ್ರೇಮ್ ಮೇಲೆ ಸಾಕಷ್ಟು ನಿರ್ಮಾಪಕರಿಗೆ ಇರುವ ನಂಬಿಕೆ. ವಿಶ್ವಾಸ. ಸದ್ಯ ಸ್ಯಾಂಡಲ್ ವುಡ್ ನ ಶೋ ಮ್ಯಾನ್ ಪ್ರೇಮ್ ತಮ್ಮ ಹೆಂಡತಿ ತಮ್ಮನಿಗಾಗಿ ಏಕ್ ಲವ್ ಯಾ ಎನ್ನುವ ಸಿನಿಮಾವನ್ನು ಮಾಡುತ್ತಿದ್ದು, ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಲೇ ಇದೆ. ಟೈಟಲ್ಲು, ಪೋಸ್ಟರ್ರು, ಫೈಟ್ ಮಾಸ್ಟರ್, ಹೀರೋಯಿನ್ ಸೇರಿದಂತೆ ಬಹಳಷ್ಟು ವಿಚಾರಕ್ಕೆ ಸುದ್ದಿಯಾಗಿದ್ದ ಏಕ್ ಲವ್ ಯಾ ಚಿತ್ರತಂಡ ಸದ್ಯಕ್ಕೇನು ಮಾಡುತ್ತಿದೆ. ಎಂಬ ಗೊಂದಲಕ್ಕೆ ಪ್ರೇಮ್ ರವರೇ ಉತ್ತರ ನೀಡಿದ್ದಾರೆ.

https://twitter.com/directorprems/status/1153587226401316864

ಈಗಲೂ ಶೂಟಿಂಗ್ ನಲ್ಲಿಯೇ ಬ್ಯುಸಿಯಾಗಿರುವ ಚಿತ್ರತಂಡ ಸದ್ಯ ಶಿವಮೊಗ್ಗದ ಜೈಲಿನಲ್ಲಿ ಬೀಡುಬಿಟ್ಟಿದೆ. ಹೌದು.. ಸ್ಟಂಟ್ ಸಿಲ್ವ ಅವರಿಂದ ಭರ್ಜರಿ ಆ್ಯಕ್ಷನ್ ಶೂಟ್ ನಡೆಯುತ್ತಿದ್ದು, ಇದೀಗ ಮುಖ್ಯ ಸೀನ್ ಒಂದಕ್ಕೆ ಚಿತ್ರತಂಡ ಶಿವಮೊಗ್ಗದ ಜೈಲಿಗೆ ಎಂಟ್ರಿ ನೀಡಿ ಸಾಹಸ ದೃಶ್ಯದ ಚಿತ್ರೀಕರಣವನ್ನು ನಡೆಸುತ್ತಿದೆ. ಈ ಬಗ್ಗೆ ಪ್ರೇಮ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು ಸೂಪರ್ ವೆದರ್​ನಲ್ಲಿ ಮಳೆ, ಚಳಿ ಎನ್ನದೇ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಬಗ್ಗೆ ಸೂಪರ್ ಎಕ್ಸಕ್ಲೂಸಿವ್ ಅಪ್​ ಡೇಟ್ ಮಾಹಿತಿ ಕೊಡ್ತೀವಿ ಅಂತಾ ಬರೆದುಕೊಂಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನನ್ನ ಪ್ರಕಾರ ಹೂ ನಗೆ ಆಮಂತ್ರಿಸಿದೆ ಸಾಂಗ್ ಬಿಡುಗಡೆ!

Previous article

ಅರುಣಿಮಾ ಘೋಷ್ ವಿರುದ್ಧ ಅಶ್ಲೀಲ ಪದ ಬಳಕೆ ವ್ಯಕ್ತಿ ಬಂಧನ!

Next article

You may also like

Comments

Leave a reply

Your email address will not be published. Required fields are marked *