ರಾಕ್ ಮತ್ತು ವಿನ್ ಡೀಸೆಲ್ ಅಭಿನಯದ Fast and Furious 9 ಟ್ರೇಲರ್ ಎಲ್ಲರ ಮನಗೆದ್ದಿದ್ದು, ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದರೆ ಸ್ಟಂಟ್ ಮ್ಯಾನ್ ಚಿತ್ರೀಕರಣದ ವೇಳೆ ಸ್ಟಂಟ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ಇತ್ತೀಚಿಗೆ ನಡೆದಿದೆ.
ದಕ್ಷಿಣ ಇಂಗ್ಲೆಂಡ್ ನ ಲೀವ್ಸ್ ಡೆನ್ ನಲ್ಲಿರುವ ವಾರ್ನರ್ ಬ್ರದರ್ಸ್ ಸ್ಟುಡಿಯೋದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ವಿನ್ ಡೀಸೆಲ್ ಅವರ ಡೂಪ್ ಜೋ ವಾಟ್ಸ್ ಪಾಲ್ಗೊಂಡಿದ್ದರು. ಫೈಟಿಂಗ್ ಶೂಟಿಂಗ್ ವೇಳೆ ಜೋ ವಾಟ್ಸ್ ಸ್ಟಂಟ್ ಮಾಡಲು ಹೋಗಿ 30 ಅಡಿಗಳ ಎತ್ತರದಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಜೋ ವಾಟ್ಸ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಕೋಮಾಗೆ ತೆರಳಿದ್ದಾರೆ ಎಂದು ವೈದ್ಯರು ದೃಢೀಕರಿಸಿದ್ದಾರೆ.
No Comment! Be the first one.