ನಟ ಸಾರ್ವಭೌಮ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ಸಿನಿಮಾ ಯುವರತ್ನ. ಈಗಾಗಲೇ ಬಹಳಷ್ಟು ವಿಚಾರದಿಂದ ಸಾಕಷ್ಟು ಸುದ್ದಿಯಲ್ಲಿರುವ ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
#YuvaRathnaa Next look & Teaser soon🙌 pic.twitter.com/dbjlHRAYEH
— Santhosh Ananddram (@SanthoshAnand15) July 25, 2019
ಸಂತೋಷ್ ಹೇಳುವ ಪ್ರಕಾರ ಈ ಹಿಂದಿನ ಯಾವ ಚಿತ್ರದಲ್ಲೂ ನೋಡಿದ ಗೆಟಪ್ ನಲ್ಲಿ ಪುನೀತ್ ಅವರನ್ನು ಯುವರತ್ನದಲ್ಲಿ ನೋಡಿಲಿದ್ದು, ಇಡೀ ಚಿತ್ರತಂಡ ಟೀಸರ್ ಸಿದ್ದ ಮಾಡುವುದರಲ್ಲಿ ಬ್ಯುಸಿಯಾಗಿದೆ. ಆದಷ್ಟು ಬೇಗ ನಿಮ್ಮ ಮುಂದೆ ಯುವರತ್ನ ಚಿತ್ರದ ಟೀಸರ್ ಬರಲಿದೆ ಎಂಬ ಮಾಹಿತಿಯನ್ನು ನೀಡಿದ್ಧಾರೆ. ಎಲ್ಲ ಅಂದುಕೊಂಡಂತಾದರೆ ಮುಂದಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಯುವರತ್ನ ಸಿನಿಮಾ ಟೀಸರ್ ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
No Comment! Be the first one.