ಸಿನಿಮಾ ಸೆಲೆಬ್ರೆಟಿಗಳು ಸರ್ಕಾರದ ಬಹುತೇಕ ಜಾಹೀರಾತುಗಳಿಗೆ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೆ ಅಂಬಾಸಿಡರ್ ಗಳನ್ನಾಗಿ, ಮಾಡಲ್ ಗಳನ್ನಾಗಿ ನೇಮಿಸುವ ಸಂಪ್ರದಾಯವನ್ನು ಎಲ್ಲ ಸರ್ಕಾರಗಳು ಪಾಲಿಸಿಕೊಂಡು ಬರುತ್ತಿವೆ. ಸದ್ಯ ಭಾರತ ಸರ್ಕಾರದ ಕ್ಷಯ ರೋಗ ನಿವಾರಣೆಯ ಜಾಗೃತಿ ಮೂಡಿಸುವ ಜಾಹೀರಾತಿಗೆ ಹಿಂದಿಯಿಂದ ಬಿಗ್ ಬೀ ಅನುತಾಬ್ ಬಚ್ಚನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ವಿಶೇಷವೆಂದರೆ ಕನ್ನಡ ವರ್ಷನ್ನಿನ ಜಾಹೀರಾತಿಗೆ ತಿಥಿ ಖ್ಯಾತಿಯ ಗಡ್ಡಪ್ಪ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಯೆಸ್.. ತಿಥಿ ಸಿನಿಮಾ ಮೂಲಕ ರಾಷ್ಟ್ರದಾದ್ಯಂತ ಮನೆ ಮಾತಾದ ಗಡ್ಡಪ್ಪ ಈ ಜಾಹೀರಾತಿನ ತುಣುಕಿನಲ್ಲಿ ನಟಿಸಿದ್ದಾರೆ. ಸ್ವಲ್ಪ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಸ್ವಲ್ಪ ಚೇತರಿಸಿಕೊಂಡ ಬೆನ್ನಲ್ಲೇ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಜಾಹೀರಾತಿನಲ್ಲಿ ನಟಿಸಿದ್ದಾರೆ. ಇದರಿಂದ ಬಂದ ಹಣ ಅವರ ಚಿಕಿತ್ಸೆಗೆ ನೆರವಾಗಲಿದೆ ಎಂದು ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.

CG ARUN

ಜೋಧ್ ಪುರ್ ಕೋರ್ಟ್ ಬ್ಯಾಡ್ ಬಾಯ್ ಗೆ ಖಡಕ್ ವಾರ್ನಿಂಗ್!

Previous article

85 ವರ್ಷದ ರೈತನಾದ ವಿಜಯ್ ಸೇತುಪತಿ!

Next article

You may also like

Comments

Leave a reply

Your email address will not be published. Required fields are marked *