ಒಂದು ಕಡೆ ನಾಗಣ್ಣ ಸಹಭಾಗಿತ್ವದ ಕುರುಕ್ಷೇತ್ರದ ಚಿತ್ರ ರಿಲೀಸ್ ಗೆ ರೆಡಿಯಾಗಿದ್ದರೆ ಮತ್ತೊಂದೆಡೆ ಅವರ ಗಿಮಿಕ್ ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ. ಈ ಮಧ್ಯ ಗಿಮಿಕ್ ಚಿತ್ರದ ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಲವ್ ಮಾಡಿ ನನ್ನಾ ಉದ್ದಾರ ಮಾಡೇ ಲಚುಮಿ ಎಂಬ ಸಾಲಿನಿಂದ ಹಾಡು ಪ್ರಾರಂಭವಾಗಿದ್ದು, ಇದನ್ನು ಕವಿರಾಜ್ ರಚಿಸಿದ್ದಾರೆ. ಸಂಚಿತ್ ಹೆಗಡೆ, ಇಂಪನಾ, ಜಯರಾಜ್ ಈ ಹಾಡಿಗೆ ದನಿಯಾಗಿದ್ದಾರೆ.
ಈ ಹಾಡು ಆನಂದ್ ಆಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಗೋಲ್ಡನ್ ಅಭಿಮಾನಿಗಳು ಈ ಹಾಡನ್ನು ಕೇಳಿ ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಚೊಚ್ಚಲ ಬಾರಿಗೆ ಗಣೇಶ್ ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಭಯ ಬೀಳಿಸಲು ಮುಂದಾಗಿದ್ದು, ಲವ್ ಬಾಯ್ ಲುಕ್ ನಲ್ಲಿ ಮಿಂಚಿದ್ದಾರೆ. ಉಳಿದಂತೆ ಗಣೇಶ್ ಗೆ ಸಾಧುಕೋಕಿಲಾ, ಶೋಭರಾಜ್, ಚಿ. ಗುರುದತ್, ರವಿಶಂಕರ್ ಗೌಡ, ಬಿಡದಿ ಸೂರಿ ಸಾಥ್ ನೀಡಿದ್ದಾರೆ.
No Comment! Be the first one.