ವಿಜಯ್ ದೇವರಕೊಂಡ ಅನ್ನೋ ಹುಡುಗ ಅರ್ಜುನ್ ರೆಡ್ಡಿಯಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದೇ ಬಂತು, ಆತನ ನಸೀಬೇ ಬದಲಾಗಿಹೋಯ್ತು. ಸಣ್ಣ ಪುಟ್ಟ ಕ್ಯಾರೆಕ್ಟರುಗಳಿಗೂ ಒದ್ದಾಡಿಕೊಂಡಿದ್ದ ದೇವರಕೊಂಡ ಇವತ್ತು ಸೌತ್ ಇಂಡಿಯಾದ ಬಹುಬೇಡಿಕೆಯ ನಟ. ಅಷ್ಟೇ ಅಲ್ಲ, ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಿಸಿಕೊಂಡ ಹೀರೋ ಕೂಡಾ ಆಗಿದ್ದಾನೆ.
ತೆಲುಗು ಸಿನಿಮಾಗಳಿಂದ ಹೆಸರುವಾಸಿಯಾದ ವಿಜಯ್ ದೇವರಕೊಂಡನ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಹೆಚ್ಚು ಕ್ರೇಜ಼್ ಇದೆ. ದೇವರಕೊಂಡನಿಗೆ ಮಹಿಳಾ ಅಭಿಮಾನಿಗಳೂ ಯಥೇಚ್ಚವಾಗಿದ್ದಾರೆ. ಈತನ ಬಗ್ಗೆ ತಿಳಿದುಕೊಳ್ಳಲು, ಇವನ ಫೋಟೋ ನೋಡಲು ಗೂಗಲ್ನಲ್ಲಿ ಹೆಚ್ಚು ಜನ ಸರ್ಚ್ ಮಾಡಿದ್ದಾರಂತೆ.
ಸದ್ಯ ಪೂರಿ ಜಗನ್ನಾಥ್ ನಿರ್ದೇಶನದ ಸಿನಿಮಾದ ಮೂಲಕ ಬಾಲಿವುಡ್ಡಿಗೂ ಕಾಲಿಡುತ್ತಿರುವ ದೇವರಕೊಂಡ ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲೂ ಸೌಂಡು ಮಾಡುವ ಸಾಧ್ಯತೆಯಿದೆ.
ಹಾಗೆ ನೋಡಿದರೆ, ಅರ್ಜುನ್ ರೆಡ್ಡಿ ಬಿಟ್ಟರೆ ಈತ ನಟಿಸಿದ ಮಿಕ್ಕ ಚಿತ್ರಗಳು ಆ ಲೆವೆಲ್ಲಿಗೆ ಹೋಗಿಲ್ಲ. ಆದರೆ, ವಿಜಯ್ ನಟನೆಯಲ್ಲಿ ಬರುತ್ತಿರುವ ಪ್ರತಿಯೊಂದು ಚಿತ್ರಗಳ ಕುರಿತಾಗಿಯೂ ಜನರಲ್ಲಿ ಕ್ಯೂರಿಯಾಸಿಟಿ ಇದ್ದೇ ಇರುತ್ತದೆ. ಬಹುಶಃ ಅರ್ಜುನ್ ರೆಡ್ಡಿ ಥರದೇ ಪಾತ್ರಗಳಲ್ಲಿ ನೋಡಲು ಜನ ಇಷ್ಟಪಡುತ್ತಿದ್ದಾರೋ ಏನೋ ಗೊತ್ತಿಲ್ಲ!