ಉತ್ತರ ಕರ್ನಾಟಕದ ಹಾವೇರಿಯ ಗೆಳೆಯರೆಲ್ಲ ಸೇರಿಕೊಂಡು ಹಾವೇರಿ ಟಾಕೀಸ್ ಕ್ರೀಯೇಷನ್ಸ್ ಬ್ಯಾನರ್ ಸ್ಥಾಪಿಸಿ ಅದರ ಮೂಲಕ ನಿರ್ಮಿಸಿರುವ ಚಿತ್ರ ಗೋರಿ. ಗೋಪಾಲಕೃಷ್ಣ ಕಥೆ, ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಕಿರುತೆರೆ ವಾಹಿನಿಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಿರಣ್ ಈ ಚಿತ್ರದ ನಾಯಕನಾಗಿದ್ದು, ಸ್ಮಿತಾನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಜಾತಿ, ಧರ್ಮ, ಸ್ನೇಹ, ಪ್ರೀತಿ ಇದೆಲ್ಲಕ್ಕಿಂತಲೂ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನು ಸಾರುವ ಈ ಚಿತ್ರಕ್ಕೆ ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಕಾಶ್ ಜವಳಿ, ಲಕ್ಷ್ಮಣ್ ಹಾವನೂರ ಹಾಗೂ ಸೋಮಣ್ಣ ಜಗ್ಗಿನ ಈ ಚಿತ್ರದ ಲಿರಿಕರ್ ಹಾಡುಗಳನ್ನು ಅನಾವರಣಗೊಳಿಸಿದರು.


ಈ ಸಂದರ್ಭದಲ್ಲಿ ನಿರ್ದೇಶಕ ಗೋಪಾಲಕೃಷ್ಣ ಮಾತನಾಡಿ, ಒಬ್ಬ ಕಲಾವಿದನಾಗಬೇಕು ಎನ್ನುವುದು ನನ್ನ ಸ್ನೇಹಿತನ ಬಹುದಿನಗಳ ಕನಸಾಗಿತ್ತು. ಸ್ನೇಹ ಮತ್ತು ಪ್ರೀತಿಯ ಕುರಿತಾಗಿ ಮಾಡಿರುವ ಕಥೆಯಿದು ಎಂದು ಹೇಳಿದರು.
ಮತ್ತೊಬ್ಬ ಪತ್ರಕರ್ತ ಜಗ್ಗಿನ್ ಅವರ ತಂದೆ ಎಚ್.ಡಿ.ಜಗ್ಗಿನ್ ಮಾತನಾಡಿ, ಈ ಚಿತ್ರದಲ್ಲಿ ನಾನು ಶಿಕ್ಷಕನ ಪಾತ್ರಮಾಡಿದ್ದೇನೆ. ನನಗೂ ಕಲಾರಂಗದ ಸೇವೆ ಮಾಡಬೇಕೆಂಬ ಆಸೆಯಿತ್ತು. ಸಾಹಿತಿಯಾದರೆ. ಪರಮೇಶಪ್ಪ ಪೂಜಾರ್ ಅವರ ಸಹಕಾರ ಈ ಚಿತ್ರಕ್ಕೆ ತುಂಬಾ ಇದೆ. ಚಿತ್ರತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.


ನಾಯಕ ಕಿರಣ್ ಮಾತನಾಡಿ, ಎರಡು ವರ್ಷಗಳಿಂದ ಈ ಸಿನಿಮಾದ ಕೆಲಸ ನಡೀತಿದೆ. ಸ್ನೇಹಿತರು ಹಾಗೂ ಊರವರೆಲ್ಲರ ಸಹಕಾರದಿಂದ ಸಿನಿಮಾ ರೆಡಿಯಾಗಿದೆ. ಇಬ್ಬರು ಸ್ನೇಹಿತರು ಹಾಗೂ ಒಂದು ಗೋರಿಯ ಸುತ್ತ ನಡೆದ ಕಥೆಯಿದು ಎಂದು ಹೇಳಿದರು.
ಮಂಜುನಾಥ ಹೆಗ್ಡೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಹಾವೇರಿಯ ಸುತ್ತಮುತ್ತ೩೫ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಒಂದು ಹಾವಿನ ಚಿತ್ರಣ ಮಾತ್ರಬಾಕಿ ಇದೆ. ಶ್ರೇಯಾ ಅಂಜುಶ್ರೀ ಈ ಚಿತ್ರದ ಒಂದು ಹಾಡಿನಲ್ಲಿ ಅಭಿನಯಿಸಿದ್ದಾರೆ. ಜಗ್ಗಿನ ೨ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

CG ARUN

ತನಿಖೆ ಸಾಂಗು ರಿಲೀಸಾಯ್ತು!

Previous article

ದಿನೇಶ್ ಬಾಬು ಕಮರಿದ ಕನಸು!

Next article

You may also like

Comments

Leave a reply

Your email address will not be published. Required fields are marked *