ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರರಾಗಿ, ನಟನಾಗಿ ಗುರುತಿಸಿಕೊಂಡಿದ್ದ ಗೋಟೂರಿ ನಿಧನ ಹೊಂದಿದ್ದಾರೆ. ಈಗೊಂದಷ್ಟು ಕಾಲದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗೋಟೂರಿಯವರು ನೆನ್ನೆ ಯಲಹಂಕದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಹಿರಿಯರಾಗಿದ್ದರೂ ಯುವಕರೇ ನಾಚುವಂಥಾ ಮಾನಸಿಕ ಉಲ್ಲಾಸ ಹೊಂದಿದ್ದವರು ಗೋಟೂರಿ. ಈ ಮಾತಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಅಲೆಲೆ ತುಂಟು ಕಣ್ಣ ಸುಂದರಿ’ ಎಂಬ ಹಾಡಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಆಪ್ತಮಿತ್ರ ಚಿತ್ರದ ರಾರಾ ಹಾಡು ಬರೆದಿದ್ದದ್ದೂ ಕೂಡಾ ಇವರೇ.
ಗೀತಸಾಹಿತಿಯಾಗಿ ಗುರುತಿಸಿಕೊಂಡು ನಟರಾಗಿಯೂ ಚಿರಪರಿಚಿತರಾಗಿದ್ದವರು ಗೋಟೂರಿ. ಉಪೇಂದ್ರ ನಿರ್ದೇಶನದ ಶ್ ಚಿತ್ರದಲ್ಲಿನ ನಾಯಕಿಯ ತಂದೆಯ ಪಾತ್ರವೂ ಸೇರಿದಂತೆ ಒಂದಷ್ಟು ಚಿತ್ರಗಳಲ್ಲವರು ಅಭಿನಯಿಸಿದ್ದರು. ವಿ ಮನೋಹರ್ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದ ಗೋಟೂರಿಯವರು ಬಹುಮುಖ ಪ್ರತಿಭೆ. ಓಂ ಸಾಯಿಪ್ರಕಾಶ್ ನಿರ್ದೇಶನದ ಆದಿಚುಂಚನಗಿರಿ ಚಿತ್ರಕ್ಕೆ ಕಥೆಯನ್ನೂ ಇವರು ರಚಿಸಿದ್ದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಥರದ ಸಿನಿಮಾಗಳಿಗೆ ಕತೆ ಬರೆದವರೂ ಇವರೇ.
ಬಹು ಕಾಲದಿಂದ ಒಂದಲ್ಲ ಒಂದು ರೀತಿಯಲ್ಲಿ ಚಿತ್ರರಂಗದೊಂದಿಗೆ ಸಂಪರ್ಕದಲ್ಲಿದ್ದ ಗೋಟೂರಿಯವರ ಹಾಡುಗಳು ಸದಾ ಜೀವಂತವಾಗಿರುತ್ತವೆ.
#
No Comment! Be the first one.