ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ಮತ್ತು ಬಿಗ್ ಬಾಸ್ ಕವಿತಾ ಗೌಡ ಜೋಡಿಯಾಗಿ ನಟಿಸಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಟ್ರೇಲರ್ ಗಳು ಇತ್ತೀಚಿಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ.
ಸ್ವಾತಂತ್ರ್ಯೋತ್ಸವಕ್ಕೆ ಬ್ರಹ್ಮಾಸ್ತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡವು ನಿರ್ಧರಿಸಿದ್ದು, ಅದಕ್ಕೂ ಮೊದಲೇ ಗುಬ್ಬಿಯ ರಿಮೇಕ್ ಹಕ್ಕುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಯೆಸ್.. ಕಾಮಿಡಿ ಕಥಾಹಂದರದ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವುದಕ್ಕೆ ಬಾಲಿವುಡ್ ಮಂದಿ ಹಾತೊರೆಯುತ್ತಿದ್ದಾರೆ. ಸದ್ಯ ಬಿಡುಗಡೆಯ ಒತ್ತಡದಲ್ಲಿರುವ ಚಿತ್ರತಂಡ ನಂತರವಷ್ಟೇ ಮಿಕ್ಕ ಯೋಜನೆಗಳಿಗೆ ಕೈ ಹಾಕಲಿದೆ. ಬೆಲ್ ಬಾಟಂ ಚಿತ್ರದಲ್ಲಿ ಸಗಣಿ ಪಿಂಟೋ ಎಂಬ ಪಾತ್ರದ ಮೂಲಕ ಮಿಂಚಿದ್ದ ಸುಜಯ್ ಶಾಸ್ತ್ರಿ ಚೊಚ್ಚಲ ಬಾರಿಗೆ ಬ್ರಹ್ಮಾಸ್ತ್ರದ ಮೂಲಕ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಮಕ್, ಅಯೋಗ್ಯ ಖ್ಯಾತಿಯ ಟಿ.ಆರ್. ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.