ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಜನೀಶ್ ಲೋಕನಾಥ್ ರನ್ನು ಥಳಿಸಿ, ಕೈ ಕಟ್ಟಿ ಗನ್ ಹಿಡಿದು ನಿಂತ ಉಗ್ರರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಅಜನೀಶ್ ಲೋಕನಾಥ್ ಕಿಡ್ನ್ಯಾಪ್ ಆದ್ರಾ ಎಂದು ಎಲ್ಲರು ಮಾತನಾಡೋಕೆ ಆರಂಭಿಸಿದ್ದಾರೆ.
ಆದ್ರೆ ಈ ಫೋಟೋ ಅಸಲಿಯತ್ತು ಬೇರೆನೇ ಇದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಪ್ರಮೋಷನ್ ಫೋಟೋ ಇದು. ಅಜನೀಶ್ ಲೋಕನಾಥ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಅದರ ಪ್ರಮೋಷನ್ ಗಾಗಿ ತೆಗೆದ ಫೋಟೋ ಇದಾಗಿದೆ.
ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಪ್ರಮೋಷನ್ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಸ್ಯಾಂಡಲ್ ವುಡ್ ಸ್ಟಾರ್ ತಾರೆಯರು ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ. ಇತ್ತೀಚೆಗೆ ಮೋಹಕ ತಾರೆ ರಮ್ಯಾ ಕೂಡ ಸಾಥ್ ನೀಡಿದ ವೀಡಿಯೋ ಟೀಸರ್ ಸಖತ್ ವೈರಲ್ ಆಗಿ ಗಮನ ಸೆಳೆದಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್, ರಮ್ಯಾ ಕೂಡ ಈ ಸಿನಿಮಾಗೆ ಸಾಥ್ ನೀಡಿದ್ದಾರೆ, ಚಿತ್ರದ ವಿಭಿನ್ನ ಪ್ರಮೋಷನ್ ಟೀಸರ್ ನಲ್ಲಿ ಅಭಿನಯಿಸಿದ್ದಾರೆ. ಆ ಸಾಲಿಗೆ ಅಜನೀಶ್ ಲೋಕನಾಥ್ ಸೇರ್ಪಡೆಯಾಗಿದ್ದಾರೆ. ಈ ಚಿತ್ರದ ಸಂಗೀತ ನಿರ್ದೇಶನ ಕೂಡ ಇವರದ್ದೇ.
ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ. ಪಿ ಅವರ ‘ಗುಲ್ ಮೋಹರ್ ಫಿಲಂಸ್’ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾವಿದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಶೀರ್ವಾದದೊಂದಿಗೆ ಆರಂಭವಾದ ಈ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಹಲವು ರಂಗಭೂಮಿ ಪ್ರತಿಭೆಗಳು ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರದಲ್ಲಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.
No Comment! Be the first one.