ಜೋಶ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಜಗನ್ ಉರುಫ್ ಜಗನ್ನಾಥ್ ಚಂದ್ರಶೇಖರ್ ಗುರುವಾರ ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಕ್ಷಿತಾ ಮುನಿಯಪ್ಪ ಜತೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ  ವೆಸ್ಟ್ ಆಫ್ ಕಾರ್ಡ್ ರೋಡ್​ನಲ್ಲಿರುವ ಕನ್ವೆಂಷನ್ ಹಾಲ್​ನಲ್ಲಿ ವಿವಾಹ ಸಮಾರಂಭ ನಡೆಯಿತು. ಮೂರು ವರ್ಷಗಳಿಂದ ಪ್ರಣಯ ಪಕ್ಷಿಗಳಾಗಿದ್ದ ಈ ಜೋಡಿಯ ಎಂಗೇಜ್ ಮೆಂಟ್ ಜನವರಿ 28ಕ್ಕೆ ನಡೆದಿತ್ತು. ಮೇ 26ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸ್ನೇಹಿತರು, ಸಂಬಂಧಿಗಳು, ಕಿರುತೆರೆ ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿದ್ದ ಜಗನ್ ‘ಬಿಗ್ ಬಾಸ್ ಸೀಸನ್ 5’ರ ಸ್ಪರ್ಧಿಯಾಗಿ ಹೆಸರುಗಳಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸುಮಲತಾ ಗೆಲುವಿಗೆ ಡಿಬಾಸ್ ಸಂತಸ!

Previous article

ಪಾರ್ವತಮ್ಮನ ಮಗಳು ಬಲು ಜೋರು!

Next article

You may also like

Comments

Leave a reply

Your email address will not be published. Required fields are marked *