ಹೊಸಬರ ಜಿಗ್ರಿ ದೋಸ್ತ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಚಿತ್ರವನ್ನು ಎ.ಎನ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಎನ್. ಗಂಗಾಧರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾವನ್ನು ಮುಂದಿನ ತಿಂಗಳು ರಿಲೀಸ್ ಮಾಡುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಸಿನಿಮಾದ ಟ್ರೇಲರ್, ಟೀಸರ್ ಹಾಗೂ ಆಡಿಯೋ ರಿಲೀಸ್ ಮಾಡುವ ಸಾಧ್ಯತೆ ಇದೆ.
ಅಂದಹಾಗೆ ಅಂದಾಜು 42 ದಿನಗಳ ಕಾಲ ಬೆಂಗಳೂರು, ದಾಂಡೇರಿ ಮುಂತಾದ ಕಡೆ ಸಿನಿಮಾದ ಚಿತ್ರೀಕರಣವನ್ನು ನಡೆದಿದೆ. ಎಸ್. ಮೋಹನ್ ರವರು ಜಿಗ್ರಿ ದೋಸ್ತ್ ಗಳಿಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಇನ್ನು ಸಿನಿಮಾ ಬಳಗದಲ್ಲಿ ರಾಧಾ ರಮಣ ಖ್ಯಾತಿಯ ಸ್ಕಂದ ಅಶೋಕ್, ಚೇತನ್ ಸೂರ್ಯ, ವಿನೋದ್ ಆಳ್ವಾ, ಅಕ್ಷತ, ಸುಷ್ಮ ಮುಂತಾದವರಿದ್ದಾರೆ. ಪ್ರಮುಖವಾಗಿ ಇಲ್ಲಿಯವರೆಗೂ ತಮ್ಮ ಚಿತ್ರಗಳಿಗೆ ಡಬ್ಬಿಂಗ್ ಮಾಡ ವಿನೋದ್ ಆಳ್ವಾ ಸ್ವತಃ ಜಿಗ್ರಿ ದೋಸ್ತ್ ನಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಇನ್ನು ದಿನೇಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಪ್ರಸಾದ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಕೌರವ ವೆಂಕಟೇಶ್ ಸಾಹಸ ಸಂಯೋಜನೆ, ಶಿವ ಪ್ರಸಾದ್ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೆಶನ ಈ ಚಿತ್ರಕ್ಕಿದೆ.
No Comment! Be the first one.