ಜಯ್ಯಮ್ಮನ ಮಗ ಖ್ಯಾತಿಯ ವಿಕಾಸ್ ನಾಯಕನಾಗಿ ನಟಿಸಿರುವ ಕಾಣದಂತೆ ಮಾಯವಾದನು ಸಿನಿಮಾದ ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಚಲಿಸುವ ಮೋಡಗಳು ಚಿತ್ರದಲ್ಲಿ ಪುನೀತ್ರಾಜ್ಕುಮಾರ್ ಹಾಡಿದ್ದ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎವರ್ ಗ್ರೀನ್ ಹಾಡುಗಳ ಪೈಕಿ ಪ್ರಮುಖವಾದದ್ದು.
ಸದ್ಯ ಅದೇ ಶೀರ್ಷಿಕೆಯಡಿ ಕನ್ನಡ ಸಿನಿಮಾವೊಂದು ನಿರ್ಮಾಣವಾಗಿ ತೆರೆಗೆ ಬರಲು ಸಿದ್ಧವಾಗಿದ್ದು, ಅದುವೇ ಕಾಣದಂತೆ ಮಾಯವಾದನು. ಈ ಚಿತ್ರವನ್ನು ರಾಜ ಪತ್ತಿಪಾರಿ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ವಿಕಾಸ್, ಲವ್ ಕಮ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದು, ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಇನ್ನು ವಿಕಾಸ್ ಗೆ ನಾಯಕಿಯಾಗಿ ಸಿಂಧೂ ಲೋಕನಾಥ್ ನಟಿಸಿದ್ದು ತೆರೆ ಮೇಲೆ ಮುದ್ದು ಮುದ್ದಾಗಿ ಕಾಣಸಿಕೊಂಡಿದ್ದಾರೆ.ಉಳಿದಂತೆ ತಾರಾಗಣದಲ್ಲಿ ದಿ. ರಾಘವ ಉದಯ್, ಸೀತಾ ಕೋಟೆ, ಅಚ್ಯುತ್ಕುಮಾರ್ ಹಾಗೂ ಧರ್ಮಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರವನ್ನು ಚಂದ್ರಶೇಖರ ನಾಯ್ಡು, ಪ್ರಗತಿ ಶಾಲೆಯ ಮುಖ್ಯಸ್ಥರಾದ ಸೋಮಸಿಂಗ್ ಹಾಗೂ ಪುಷ್ಪಾ ಸೋಮ್ಸಿಂಗ್ ನಿರ್ಮಾಣ ಮಾಡಿದ್ದಾರೆ.