#ಮಿಟೂ ಅಭಿಯಾನ ಬಂದಮೇಲಂತೂ ಎಂದೋ ಆಗಿದ್ದ ಲೈಂಗಿಕ ಶೋಷಣೆಗೂ ಬಲಬಂದು ಧೈರ್ಯವಾಗಿ ಹೆಣ್ಣು ಮಕ್ಕಳು ತಮಗಾದ ನೋವನ್ನು ಹೇಳಿಕೊಳ್ಳುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಪಬ್ಲಿಸಿಟಿ ಗಿಟ್ಟಿಸಿಕೊಂಡವರ ಕಥೆಯೂ ಇದೆ ಬಿಡಿ. ಸದ್ಯಕ್ಕೆ ಕಾಂಚನಾ 3 ಸಿನಿಮಾದಲ್ಲಿ ನಟಿಸಿರುವ ನಾಲ್ಕು ನಾಯಕಿಯ ಪೈಕಿ ರಷ್ಯಾದ ಹುಡುಗಿ ರಿ ಡಜ್ವಿ ಅಲೆಕಾಂಡ್ರಾ ಕಾಸ್ಟಿಂಗ್ ಕೌಚ್ ಬಗ್ಗೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ರಿ ಡಿಜ್ವಿ ಅವರನ್ನು ಪಬ್ ಒಂದರಲ್ಲಿ ಭೇಟಿ ಮಾಡಿದ್ದ ಪೋಟೋಗ್ರಾಫರ್ ರೂಪೇಶ್ ಕುಮಾರ್ “ನಿಮ್ಮ ಪೋಟೋ ಶೂಟ್ ಮಾಡೋಣ ನನಗಿರುವ ಕಾಂಟ್ಯಾಂಕ್ಟ್ ಬಳಸಿ ನಿಮಗೆ ಅವಕಾಶ ಕೊಡಿಸುತ್ತೇನೆ” ಎಂದಿದ್ದರಂತೆ. ಆದ್ರೆಫೋಟೋಶೂಟ್ ಬಳಿಕ ತನ್ನ ಅಸಲಿಮುಖ ಪರಿಚಯಿಸಿದ ರೂಪೇಶ್ “ನೀನು ನನ್ನ ಜೊತೆ ಮಲಗದೇ ಹೋದ್ರೆ ನಿನ್ನ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ” ಎಂದು ಬ್ಲಾಕ್ ಮೇಲ್ ಮಾಡಲುಆರಂಭಿಸಿದ್ದನಂತೆ. ಇದರಿಂದ ಮನನೊಂದ ನಟಿ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು, ಸದ್ಯ ರೂಪೇಶ್ ಮೇಲಿನ ಆರೋಪ ಸಾಬೀತಾಗಿ ಪೋಲೀಸರು ರೂಪೇಶ್ ನನ್ನು ವಶಕ್ಕೆ ಪಡೆದಿದ್ದಾರೆ.
No Comment! Be the first one.