ಈಗ ಕೊರೋನಾ, ಲಾಕ್ ಡೌನು ಅಂತೆಲ್ಲಾ ಮನೆಯಲ್ಲಿ ಕೂರುವ ಸಂದರ್ಭ ಒದಗಿಬಂದಿದೆಯಲ್ಲಾ? ಈ ಹೊತ್ತಿನಲ್ಲೇ ರವಿತೇಜ ಮತ್ತು ಅವರ ಸ್ನೇಹಿತರೆಲ್ಲಾ ಸೇರಿ ʻಕಂಟ್ರಿ ಸಾರಾಯಿʼ ಚಿತ್ರದ ಸರಕು ರೆಡಿ ಮಾಡಿದ್ದಾರೆ.
ಕೊರೋನಾ ವೈರಸ್ಸು ಅಂತೊಂದು ಹೆಸರು ಕೇಳಿಬಂದಿದ್ದೇ ಇಡೀ ಜಗದ ಕನಸುಗಳೆಲ್ಲವೂ ಕಮರಿಹೋಗಿದೆ. ಇಂಥಾ ಸಾವಿರ ವೈರಸ್ಸುಗಳು ಮನುಕುಲವನ್ನು ಸವರಿಕೊಂಡು ಹೋದರೂ ಕ್ರಿಯಾಶೀಲ ಮನಸುಗಳು ಸುಮ್ಮನೇ ಕೂರಲು ಸಾಧ್ಯವಿಲ್ಲ. ಈಗಾಗಲೇ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ನಟನಾಗಿ ಗುರುತಿಸಿಕೊಂಡು, ನಿರ್ದೇಶನದ ಪಟ್ಟುಗಳನ್ನೂ ಕಲಿತು, ಜಾತ್ರೆ ಮತ್ತು ಸಾಗುತ ದೂರ ದೂರ ಎಂಬೆರಡು ಚಿತ್ರಗಳನ್ನು ನಿರ್ದೇಶಿಸಿರುವವರು ರವಿತೇಜ. ರಾಜಧಾನಿ ಸಿನಿಮಾದಲ್ಲಿ ಯಶ್ ಸೇರಿದಂತೆ ಐದು ಜನ ಹೀರೋಗಳಿದ್ದರು. ಅದರಲ್ಲಿ ರವಿತೇಜ ಕೂಡಾ ಒಬ್ಬರು. ಇನ್ನೇನು ತೆರೆಗೆ ಬರಲಿರುವ ಶಾರ್ದೂಲ ಸಿನಿಮಾದಲ್ಲೂ ರವಿತೇಜ ಲೀಡ್ ಪಾತ್ರದಲ್ಲಿ ನಟಿಸಿದ್ದಾರೆ. ರವಿತೇಜ ನಿರ್ದೇಶನದ ಸಾಗುತ ದೂರ ದೂರ ಸಿನಿಮಾ ಕೋವಿಡ್ ಎಫೆಕ್ಟು ಆರಂಭಕ್ಕೂ ಮುನ್ನ ತೆರೆಗೆ ಬಂದಿತ್ತು. ಅತ್ಯುತ್ತಮ ವಿಮರ್ಶೆಯ ಜೊತೆಗೆ ಜನಮೆಚ್ಚುಗೆಗೂ ಪಾತ್ರವಾಗಿತ್ತು.
ಈಗ ಕೊರೋನಾ, ಲಾಕ್ ಡೌನು ಅಂತೆಲ್ಲಾ ಮನೆಯಲ್ಲಿ ಕೂರುವ ಸಂದರ್ಭ ಒದಗಿಬಂದಿದೆಯಲ್ಲಾ? ಈ ಹೊತ್ತಿನಲ್ಲೇ ರವಿತೇಜ ಮತ್ತು ಅವರ ಒಂದಿಷ್ಟು ಜನ ಸ್ನೇಹಿತರೆಲ್ಲಾ ಸೇರಿ ʻಕಂಟ್ರಿ ಸಾರಾಯ್ʼ ಚಿತ್ರದ ಸರಕು ರೆಡಿ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಒಂದು ಊರಿನಲ್ಲಿ ನಡೆಯಬಹುದಾದ, ನಿಜಕ್ಕೂ ನಡೆದ ಒಂದಷ್ಟು ಘಟನೆಗಳನ್ನೆಲ್ಲಾ ಸೇರಿಸಿ ಅದ್ಭುತವಾದ ಸಬ್ಜೆಕ್ಟು ಸಿದ್ದಗೊಂಡಿದೆ. ವಸಿಷ್ಠ ಮತ್ತು ರಾಜಧಾನಿ ಸಂದೀಪ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಸಿಷ್ಠ ಮತ್ತು ಸಂದೀಪ್ ಅದ್ಭುತ ನಟರು ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಕನ್ನಡದ ಪ್ರಮುಖ ಪೋಷಕ ಕಲಾವಿದನಾಗಿ ಹೆಸರು ಮಾಡಿರುವ ಸಂದೀಪ್ ನಿಜಕ್ಕೂ ದೈತ್ಯ ಕಲಾವಿದ. ಇಂಥಾ ಸಂದೀಪ್ ತಾಕತ್ತಿಗೆ ತಕ್ಕುದಾದ ಪಾತ್ರಗಳು ಬಹುಶಃ ಇನ್ನೂ ಅವರಿಗೆ ದಕ್ಕಿಲ್ಲ. ʻಕಂಟ್ರಿ ಸಾರಾಯ್ʼ ಅದನ್ನು ಸಾಧ್ಯವಾಗಿಸುವ ಎಲ್ಲ ಸೂಚನೆಗಳೂ ಇವೆ.
ರವಿತೇಜ ಕತೆ, ವಿಜಯ್ ಶೋಭರಾಜ್ ಮತ್ತು ವೆಂಕಟ್ ಚಿತ್ರಕತೆ, ಜೀವಾ ಛಾಯಾಗ್ರಹಣ, ವೆಂಕಟ್ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನವಿರುವ ʻಕಂಟ್ರಿ ಸಾರಾಯಿʼ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜಿಸಲಿದ್ದಾರೆ. ಮ್ಯೂಸಿಕ್ಕಿನ ಜೊತೆಗೆ ವಿಶೇಷ ಪಾತ್ರದಲ್ಲಿ ಕೂಡಾ ಮಣಿಕಾಂತ್ ಕದ್ರಿ ಅಭಿನಯಿಸುತ್ತಿರೋದು ವಿಶೇಷ. ವಸಿಷ್ಠ ಸಿಂಹ ಮತ್ತು ಸಂದೀಪ್ ಅವರುಗಳ ಜೊತೆಗೆ ಉಷಾ ಭಂಡಾರಿ, ರವಿತೇಜ, ರಜನಿ ಪ್ರಕಾಶ್ ಮುಂತಾದವರು ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ಸ್ಪಷ್ಟವಾಗಿ ಕನ್ನಡ ಮಾತಾಡುವ ಇಬ್ಬರು ನಾಯಕಿಯರು ಬೇಕಾಗಿದ್ದಾರೆ. ಅರ್ಹರು ನಿರ್ದೇಶಕರನ್ನು ಸಂಪರ್ಕಿಸಬಹುದು. ಈ ಚಿತ್ರದಕ್ಕೆ ಅವಿ ಪಬ್ಲಿಸಿಟಿ ವಿನ್ಯಾಸ ಮಾಡುತ್ತಿದ್ದಾರೆ.
ಅಂದಹಾಗೆ, ಇವತ್ತು ನಟ, ನಿರ್ದೇಶಕ ರವಿ ತೇಜ ಅವರ ಜನ್ಮದಿನ ಕೂಡಾ. ನಮ್ಮ ಕಡೆಯಿಂದ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು…
No Comment! Be the first one.