ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೀಪಾ (ಮಯೂರಿ) ಗೆ ಅಚಾನಕ್ಕಾಗಿ ತನ್ನ ಅಜ್ಜಿ ಬರೆದ ಆಸ್ತಿಯ ವೀಲ್ ಸಿಗುತ್ತದೆ. ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದ ದೀಪಾ, ಆ ಆಸ್ತಿಯನ್ನು ಮಾರಲು ಸಕಲೇಶಪುರದ ಎಸ್ಟೇಟ್ ಗೆ ತನ್ನ ಪ್ರಿಯಕರನೊಂದಿಗೆ ಬರುತ್ತಾಳೆ.
ಇಂದು ನಟಿ ಮಯೂರಿ ಅವರ ಹುಟ್ಟು ಹಬ್ಬಕ್ಕಾಗಿ “ಆದ್ಯಂತ” ಚಿತ್ರತಂಡವು ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಮೊದಲ ಬಾರಿಗೆ ಮಯೂರಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ಸಿನಿಮಾ ಇದಾಗಿದೆ. ತೆಲುಗಿನ ಖ್ಯಾತ ನಿರ್ದೇಶಕರಾದ ರಾಜಮೌಳಿ ಮತ್ತು ರಾಮ್ಗೋಪಾಲ್ ವರ್ಮಾ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಪುನೀತ್ ಶರ್ಮಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿರುವುದು ವಿಶೇಷ.
ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೀಪಾ (ಮಯೂರಿ) ಗೆ ಅಚಾನಕ್ಕಾಗಿ ತನ್ನ ಅಜ್ಜಿ ಬರೆದ ಆಸ್ತಿಯ ವೀಲ್ ಸಿಗುತ್ತದೆ. ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದ ದೀಪಾ, ಆ ಆಸ್ತಿಯನ್ನು ಮಾರಲು ಸಕಲೇಶಪುರದ ಎಸ್ಟೇಟ್ ಗೆ ತನ್ನ ಪ್ರಿಯಕರನೊಂದಿಗೆ ಬರುತ್ತಾಳೆ. ಎಸ್ಟೇಟ್ ಮನೆಯಲ್ಲಿ ಅವಳಿಗೆ ಹಲವು ವಿಚಿತ್ರವಾದ ಘಟನೆಗಳು ನಡೆಯುತ್ತವೆ. ದೀಪಾ ಕೂಡ ಆ ಘಟನೆಗಳ ಸುಳಿಗೆ ಸಿಲುಕಿಕೊಳ್ಳುತ್ತಾಳೆ. ಆ ಘಟನೆ ಏನು? ಅವಳು ಹೇಗೆ ಅದರಿಂದ ಪಾರಾಗಿ ಬರುತ್ತಾಳೆ ಎನ್ನುವ ಅಂಶಗಳನ್ನಿಟ್ಟುಕೊಂಡು ಚಿತ್ರ ಮಾಡಲಾಗಿದೆ.
ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಲೇಖನಾ ಕ್ರಿಯೇಷನ್ ಮತ್ತು ಆರ್ ಆರ್ ಮೂವೀಸ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿ ಬಂದಿದೆ. ಮಯೂರಿ, ಹೊಸ ಕಲಾವಿದ ದಿಲೀಪ್, ರಮೇಶ್ ಭಟ್, ಶ್ರೀನಾಥ್ ವಸಿಷ್ಠ, ಪ್ರಶಾಂತ್ ನಟನಾ, ಟಿಕ್ ಟಾಕ್ ಖ್ಯಾತಿಯ ಕಲಾವಿದ ನಿಖಿಲ್ ಗೌಡ ತಾರಾಗಣದಲ್ಲಿ ಇದ್ದಾರೆ. ರಮೇಶ್ ಬಾಬು ಟಿ ನಿರ್ಮಾಪಕರು. ಪ್ರಕಾಶ್ ಎಲಗೂಡು, ಮೋಹನ್ ಕುಮಾರ್ ಆರ್.ಎಸ್ ಸಹ ನಿರ್ಮಾಪಕರು. ನವೀನ್ ಕುಮಾರ್ ಚಲ್ಲ ಸಿನಿಮಾಟೋಗ್ರಫಿಯಲ್ಲಿ ಚಿತ್ರ ಮೂಡಿ ಬಂದಿದ್ದು, ಸ್ಯಾಂಡಿ ಸಂಗೀತ ನೀಡಿದ್ದಾರೆ.
No Comment! Be the first one.