ಗರುಡ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ಕಪಟನಾಟಕ ಪಾತ್ರಧಾರಿ. ಈ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಚಿತ್ರದ ನಿರ್ದೇಶಕ ಕ್ರಿಷ್ ಅವರಿಗೆ ಇದು ಮೊದಲ ಪ್ರಯತ್ನ. ಈ ಸಿನಿಮಾದ ಇನ್ನಿತರೆ ವಿಚಾರಗಳ ಬಗ್ಗೆ ಅವರಿಲ್ಲಿ ಮಾತಾಡಿದ್ದಾರೆ…

– ನಿಮ್ಮ ಊರು, ಬೆಳೆದ ಪರಿಸರ, ನಿಮ್ಮ ಹಿನ್ನೆಲೆ ಏನು?
ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಓದಿ ಬೆಳೆದದ್ದು. ಡಿಪ್ಲಮೊ ಮತ್ತು ಇಂಜಿನಿಯರಿಂಗ್ ಮುಗಿಸಿದ್ದೇನೆ. ಪ್ರೈಮರಿ ಶಾಲೆಯಲ್ಲಿದ್ದಾಗಲೇ ನಾಟಕದಲ್ಲಿ ಪಾತ್ರ ಮಾಡುತ್ತಿದ್ದೆ. ಇಂಜಿನಿಯರಿಂಗ್ ಮುಗಿದ ನಂತರ ಕೆಲಸ ಮಾಡುತ್ತಿದ್ದೆ.ಅಮರ ಮಧುರ ಪ್ರೇಮ ಅನ್ನೋ ಕಾದಂಬರಿ ಸಹ ಬರೆದು ಪಬ್ಲಿಷ್ ಮಾಡಿದ್ದೇನೆ. ಸಿನಿಮಾ ನೋಡಿ ನೋಡಿ ನಾನ್ಯಾಕೆ ಡೈರೆಕ್ಷನ್ ಮಾಡಬಾರದು ಅಂತ ಅನಿಸಿದಾಗ ವಿಜಯ ಫಿಲ್ಮ್ ಇನ್ಸ್ಟಿಟ್ಯೂಟ್ಗೆ ಸೇರಿದೆ. ಅಲ್ಲಿ ಸ್ವಲ್ಪ ಕಲಿತುಕೊಂಡೆ. ಯು-ಟ್ಯೂಬ್‌ನಲ್ಲಿ ನೋಡಿ ನೋಡಿ ಕಲಿತು ನಾನು ನನ್ನ ಸ್ನೇಹಿತ ಅರುಣ್ ಜೊತೆ ಸೇರಿ ಒಂದು ಸಿನಿಮಾ ಪ್ರಾರಂಭಿಸಿದೆವು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸ್ವಲ್ಪ ಪೆಂಡಿಂಗ್ ಉಳಿಯಿತು. ಈ ಮಧ್ಯೆ ನಾನು ಇನ್ನೊಂದು ಕಥೆ ರೆಡಿ ಮಾಡಿ ನನ್ನ ಫ್ರೆಂಡ್ಸ್‌ಗೆ ಹೇಳಿದೆ. ಎಲ್ಲರೂ ಸ್ಕ್ರಿಪ್ಟ್ ಚೆನ್ನಾಗಿದೆ ಎಂದು ಹೇಳಿದರು. ಹೀಗೆ ರೆಡಿಯಾದ ಸಿನಿಮಾ ಕಪಟ ನಾಟಕ ಪಾತ್ರಧಾರಿ.

– ಕಪಟ ನಾಟಕ ಪಾತ್ರಧಾರಿ ಚಿತ್ರದ ವಿಶೇಷತೆಗಳೇನು?
ಈ ಸಿನಿಮಾದಲ್ಲಿ ಹೆಚ್ಚಿನ ವಿಷಯಗಳು ಆಟೋ ಒಳಗೇ ನಡೆಯುವುದರಿಂದ ಈ ಆಟೋ ಒಳಗಿನ ಶೂಟ್ ಮಾಡುವುದು ತುಂಬಾ ಚಾಲೆಂಜಿಂಗ್ ಆಗಿತ್ತು. ನಮ್ಮಟೀಮ್ನಲ್ಲಿ ಎಲ್ಲರೂ ಯಂಗ್ ಆಗಿದ್ರಿಂದ ಎನೆರ್ಜಿಟಿಕ್ ಆಗಿ ಕೆಲಸ ಮಾಡ್ತಿದ್ರು. ಕಾಲೇಜ್ನಲ್ಲಿ ಹೇಗೆ ಇರ್ತಿದ್ವೋ ಹಾಗೆ ಇರ್ತಿದ್ವಿ ಶೂಟಿಂಗ್ ಸ್ಪಾಟ್ನಲ್ಲಿ. ಕಪಟ ನಾಟಕ ಪಾತ್ರಧಾರಿ ಚಿತ್ರದ ವಿಶೇಷತೆಯೆಂದರೆ ಎಲ್ಲರೀತಿಯ ಹಂದರಗಳೂ ಒಂದೇ ಸಿನಿಮಾದಲ್ಲಿದೆ. ಸಿನಿಮಾನಲ್ಲಿ ಕಮರ್ಷಿಯಲ್ ಎಲಿಮೆಂಟ್, ಮೆಸೇಜ್, ವಿಶ್ಯುಯಲ್ಸ್, ಹಾಡುಗಳು ಪ್ರತಿಯೊಂದೂ ಸಹ ಸಮಯ ಹೋಗೋದೇ ತಿಳಿಯಲ್ಲ. ಸಿನಿಮಾ ನೋಡಿ ಬಂದ ಮೇಲೆ ಒಂದೊಳ್ಳೆ ಸಿನಿಮಾ ನೋಡಿದ್ವಿ ಅನ್ನೋ ಭಾವನೆ ಬರುತ್ತೆ.

– ಶೂಟಿಂಗ್ ಟೈಮ್ experience ಹೇಗಿತ್ತು?
ಬೆಂಗಳೂರಿನ ಒಬ್ಬ ಸಾಮಾನ್ಯ ಆಟೋ ಡ್ರೈವರ್ ಜೀವನದ ಕಥೆ ಆದ್ದರಿಂದ ಹೊರದೇಶದಲ್ಲೆಲ್ಲೂ ಶೂಟಿಂಗ್ ಮಾಡುವ ಪ್ರಮೇಯವಿರಲಿಲ್ಲ. ಬೆಂಗಳೂರಿನ ವಸಂತನಗರ, ಹನುಮಂತನಗರ, ಶ್ರೀನಗರ, ಗಿರಿನಗರ ಈ ಸುತ್ತಮುತ್ತಲೇ ಶೂಟಿಂಗ್ ಮಾಡಿದ್ದೇವೆ. ಸಿನಿಮಾದ ಹೆಚ್ಚಿನ ಕಥೆ ಆಟೋನಲ್ಲೇ ನಡೆಯುವುದರಿಂದ ರೋಡ್ನಲ್ಲಿ, ಟ್ರಾಫಿಕ್‌ನಲ್ಲಿ ಹೆಚ್ಚು ಶೂಟಿಂಗ್ ಮಾಡಿದ್ರಿಂದ ಒಳ್ಳೆ ಎಕ್ಸ್‌ಪೀರಿಯನ್ಸ್ ಆಯಿತು. ನಮ್ಮ ಡಿಓಪಿ ಪರಮೇಶ್ ಅವರೂ ಸಹ ಚೆನ್ನಾಗಿ ಪ್ಲಾನ್ ಮಾಡಿಕೊಟ್ರು. ಕೆಲವು ಹಾಡುಗಳನ್ನು ಟ್ರಾಫಿಕ್‌ನಲ್ಲಿ ಹಾಗೂ ಹೂವಿನ ಮಾರ್ಕೆಟ್‌ಗಳಲ್ಲಿ ಶೂಟ್ ಮಾಡಿದ್ದೇವೆ. ಯಾವುದೇ ತೊಂದರೆಯಾಗದಂತೆ ಪಬ್ಲಿಕ್ ಸಹ ಸಹಾಯ ಮಾಡಿದರು. ಪ್ರತಿ ದಿನ ಪ್ರತಿ ಶಾಟ್ ಎಂಜಾಯ್ ಮಾಡಿಕೊಂಡು ಶೂಟ್ ಮಾಡಿದ್ವಿ.

– ಯಾವ ಕಾರಣಕ್ಕೆ ನಿರ್ದೇಶನ ನಿಮಗೆ ಹೆಚ್ಚು ಆಕರ್ಷಿಸಿದ್ದು?
ನಮ್ಮ ಮನಸ್ಸಿನಲ್ಲಿರೊ ಥಾಟ್ಸ್‌ನ ಹಲವು ವಿಧದಲ್ಲಿ ತೋರಿಸುವ ಕ್ಷೇತ್ರವೇ ಈ ನಿರ್ದೇಶನ ಕ್ಷೇತ್ರ. ನಾನೇ ಕಥೆ ಬರೆದು, ಯೋಚನೆ ಮಾಡಿ ಇದೇ ಥರ ಬರಬೇಕು, ಇದೇ ತರಹದ ಪಾತ್ರ ಇರಬೇಕು, ಹೀಗೇ ನಟನೆ ಮಾಡಿಸ್ಬೇಕು ಅಂತ ಯೋಚನೆ ಮಾಡೋ ರೀತಿ ಇದೆಯಲ್ಲಾ? ಅದು ಇಂಟ್ರೆಸ್ಟಿಂಗ್ ಆಗಿರುತ್ತದೆ. ಅದಕ್ಕೆ ನಿರ್ದೇಶನಕ್ಕಿಳಿದೆ. ನಾನು ಯಾವುದಾದರೊಂದು ಸನ್ನಿವೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಯಾವರೀತಿ ಬಳಸಿಕೊಳ್ಳಬಹುದು ಎಂಬುದನ್ನು ಯೋಚನೆ ಮಾಡ್ತಿರ್ತೀನಿ.

– ಕಪಟ ನಾಟಕ ಪಾತ್ರಧಾರಿ ಸಿನಿಮಾದ ಕತೆ ನಿಮ್ಮಲ್ಲಿ ಹುಟ್ಟಿಕೊಂಡಿದ್ದು ಹೇಗೆ?
ಒಬ್ಬ ಆಟೋ ಡ್ರೈವರ್ ಜೀವನ ಬೆಳಗ್ಗಿನಿಂದ ಸಂಜೆವರೆಗೆ ಹೇಗಿರುತ್ತೆ ಅಂತಯೋಚನೆ ಮಾಡಿದಾಗ ಹುಟ್ಟಿಕೊಂಡಕಥೆ ಇದು. ಒಬ್ಬ ಆಟೋ ಡ್ರೈವರ್ ಒಂದು ದಿನದಲ್ಲಿ ಏನೇನು ಮಾಡ್ತಾನೆ, ಯಾರ‍್ಯಾರನ್ನ ಮೀಟ್ ಮಾಡ್ತಾನೆ, ಯಾವ ಥರದ ಕಸ್ಟಮರ‍್ಸ್‌ನ ಮೀಟ್ ಮಾಡ್ತಾನೆ, ಏನೇನು ಯೋಚನೆ ಮಾಡ್ತಾನೆ ಅಂತ ಒಂದೊಂದೇ ಪಾತ್ರಗಳನ್ನು ಸೇರಿಸುತ್ತಾ ಹೋದೆ. ಕಾಮಿಡಿ, ಲವ್, ತಂದೆ-ತಾಯಿ ಸೆಂಟಿಮೆಂಟ್, ಹಾರರ್, ಫೈಟ್‌ಎಲ್ಲ ಎಲಿಮೆಂಟ್ಸ್ ಬರುತ್ತದೆ.

– ಈ ಚಿತ್ರಕ್ಕೆ ಕಲಾವಿದರನ್ನು ಆಯ್ಕೆ ಮಾಡಿಕೊಂಡ ಸಂದರ್ಭ ತಿಳಿಸಿ
ಈ ಚಿತ್ರಕ್ಕೆ ನಾಯಕನನ್ನ ಹುಡುಕುತ್ತಿದ್ದಾಗ ಹುಲಿರಾಯಟ್ರೈಲರ್ ನೋಡಿದ್ವಿ. ಆಗ ಈಚಿತ್ರಕ್ಕೆಇವರು ಸರಿಹೋಗ್ತಾರೆ ಎಂದು ಬಾಲು ನಾಗೇಂದ್ರ ಅವರ ಬಳಿ ಕಥೆ ಹೇಳಿದೆ. ಅವರು ಕಥೆ ಕೇಳಿ ಬಹಳ ಚೆನ್ನಾಗಿದೆ ಅಂತ ಒಪ್ಪಿಕೊಂಡ್ರು. ಹೀರೋಯಿನ್ ಆಗಿ ಸಂಗೀತ ಭಟ್ ಅವರನ್ನ ಕೇಳಿದ್ವಿ. ಒಬ್ಬ ಮಿಡ್ಲ್‌ಕ್ಲಾಸ್ ಹುಡುಗಿ ಪಾತ್ರ ಇದೆ ಅಂತಾ. ಅವರೂ ಸಹ ಕಥೆಕೇಳಿ ಒಪ್ಪಿಕೊಂಡ್ರು. ತಂದೆ ಪಾತ್ರದಲ್ಲಿ ಕರಿಸುಬ್ಬು, ವಿಲನ್ ಪಾತ್ರದಲ್ಲಿ ಉಗ್ರಂ ಮಂಜು, ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಶಂಕರ್ ನಾರಾಯಣ್, ಹಾಗೂ ಸ್ನೇಹಿತರ ಪಾತ್ರದಲ್ಲಿ ಜಯದೇವ್, ಸುನೀಲ್ ಕುಲಕರ್ಣಿ ಅವರುಗಳ ಬಹಳ ಚೆನ್ನಾಗಿ ನಟಿಸಿದ್ದಾರೆ.

CG ARUN

EXCLUSIVE : ಇಷ್ಟೊಂದು ವಿವರ CINIBUZZನಲ್ಲಿ ಮಾತ್ರ..!

Previous article

ನನಗೂ ಕುಟುಂಬ ಇದೆ… ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ!

Next article

You may also like

Comments

Leave a reply

Your email address will not be published. Required fields are marked *