ಭಾರತದ ಚಿತ್ರರಂಗದಲ್ಲೇ ಸೆನ್ಸೇಷನ್ ಸೃಷ್ಟಿಸಿದ ಕನ್ನಡದ ಚಿತ್ರ ಕೆಜಿಎಫ್ ನ ವಿಲನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ ನಲ್ಲಿ ಅಬ್ಬರಿಸಿದ್ದ ಖಳನಟ ಜಾನ್ ಕೊಕೇನ್ ವಿವಾಹದ ಸಿಹಿಯಲ್ಲಿದ್ದಾರೆ. ಕೇರಳ ಮೂಲಕ ಪ್ರಿಯಾ ರಾಮಚಂದ್ರನ್ ಎಂಬುವವರನ್ನು ಜಾನ್ ವರಿಸಿದ್ದಾರೆ. ಕೇರಳದ ವಿಶು ಹಬ್ಬದ ಸಂಭ್ರಮದಂದೇ ವಿವಾಹ ಜರುಗಿರುವುದು ವಿಶೇಷವಾಗಿದೆ.
ಮೂಲತಃ ಮಲಯಾಳಿಯಾಗಿರೋ ಜಾನ್, ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದವರು. ನಂತರ ಸ್ಯಾಂಡಲ್ ವುಡ್ ಗೆ ಜೇಕಬ್ ವರ್ಗೀಸ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ ಪೃಥ್ವಿ ಸಿನಿಮಾದ ಮೂಲಕ ಎಂಟ್ರಿ ಕೊಟ್ಟರು. ಮುಂದೆ ದರ್ಶನ್ ಅಭಿನಯದ ಶೌರ್ಯ, ಶಿವರಾಜ್ ಕುಮಾರ್ ಅಭಿನಯದ ಮೈಲಾರಿ, ಸೂರಿ ನಿರ್ದೇಶನದ ಅಣ್ಣಾಬಾಂಡ್ ಹೀಗೆ ಹಲವಾರು ಸಿನಿಮಾಗಳಲ್ಲಿ ನಟನೆಯ ಚಾಪು ಮೂಡಿಸಿದ್ದಾರೆ. ಸದ್ಯ ಯುವ ರತ್ನ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲೂ ನಟಿಸುತ್ತಿರುವ ಜಾನ್, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಬಹು ಬೇಡಿಕೆಯ ವಿಲನ್ ಕೂಡ ಆಗಿರುವುದು ವಿಶೇಷ.
No Comment! Be the first one.