ಕಿಚ್ಚ ಸುದೀಪ್ ಇತ್ತೀಚಿಗಷ್ಟೇ ಸಲ್ಮಾನ್ ಖಾನ್ ಅವರ ದಬಾಂಗ್ 3 ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದ ಬಹುತೇಕ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಅಗಿತ್ತು. ಸುದೀಪ್ ಅವರ ಜತೆಗೆ ಜೋಗಿ ಪ್ರೇಮ್, ಜಾಕ್ ಮಂಜು ಸಹ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿರುವ ಕುರಿತು ಹಲವಾರು ಗಾಸಿಪ್ಪುಗಳು ಓಡಾಡುತ್ತಿದ್ದವು. ಇದಕ್ಕೆ ನಟ ಸುದೀಪ್ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಆ ಪೋಟೋಗಳು ರಿಲೀಸ್ ಆದ ಬೆನ್ನಲ್ಲೇ ಜಾಕ್ ಮಂಜು ಹೊಸ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು, ಸಲ್ಮಾನ್ ಖಾನ್ ಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಈ ಕುರಿತು ಸುದೀಪ್ ಟ್ವೀಟ್ ಮಾಡಿ ಇದು ಗಾಳಿ ಸುದ್ದಿ. ಇದನ್ನು ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿರುವ ನಟ ಸುದೀಪ್, ಇದು ಸುಳ್ಳು ಸುದ್ದಿ. ಪ್ರೇಮ್ ಕೇವಲ ನನ್ನ ಜೊತೆ ಬಂದು ಸಲ್ಮಾನ್ ಖಾನ್ ಭೇಟಿಯಾಗಿದ್ದಾರೆ. ಅಷ್ಟೆ ಅದನ್ನು ಬೇರೆ ರೀತಿ ಬಿಂಬಿಸೋದು ಸರಿಯಲ್ಲ. ಸಲ್ಮಾನ್ ಸಿನಿಮಾ ಪ್ರೇಮ್ ಮಾಡುತ್ತಿಲ್ಲ ಎಂದು ಹೇಳುವ ಮೂಲಕ ಸುಳ್ಳು ಸುದ್ದಿಗೆ ಕಿಚ್ಚ ಬ್ರೇಕ್ ಹಾಕಿದ್ದಾರೆ.
No Comment! Be the first one.