ಸ್ಯಾಂಡಲ್ ವುಡ್ ನ ಡೆಡ್ಲಿ ಎಂದೇ ಖ್ಯಾತಿ ಪಡೆದ ಆದಿತ್ಯ ಮೇಲೆ ಬಾಡಿಗೆ ಕಟ್ಟದೇ ವಂಚಿಸಿರುವ ಆರೋಪ ಕೇಳಿಬಂದಿದೆ. ಸದಾಶಿವನಗರದ ಮನೆಯೊಂದರಲ್ಲಿ ವಾಸವಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಏಳು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲವಂತೆ. ಇಲ್ಲಿಯವರೆಗೂ ಅಂದಾಜು ಎರಡು ಲಕ್ಷದ ಎಂಬತ್ತೆಂಟು ಸಾವಿರ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮನೆಯ ಮಾಲೀಕ ಪ್ರಸನ್ನ ಆರೋಪಿಸಿದ್ದಾರೆ.
ಈ ಸಂಬಂಧ 2018 ನವೆಂಬರ್ನಲ್ಲೇ ನಗರದ ಸಿಟಿ ಸಿವಿಲ್ ಕೋರ್ಟ್ನಲ್ಲಿ ಎವಿಕ್ಷನ್ ಫೈಲ್ ಮಾಡಲಾಗಿತ್ತು. ಇದೀಗ ಮನೆ ಖಾಲಿ ಮಾಡುವಂತೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಬಾಡಿಗೆ ವಿಚಾರವಾಗಿ ಮೇ 1 ರಂದು ಮನೆ ಮಾಲೀಕ ಪ್ರಸನ್ನ ಹಾಗೂ ರಾಜೇಂದ್ರ ಸಿಂಗ್ ಬಾಬು ನಡುವೆ ಜಗಳ ನಡೆದಿತ್ತು. ಈ ವೇಳೆ ರಾಜೇಂದ್ರ ಸಿಂಗ್ ಬಾಬು ಹಾಗೂ ರಿಷಿಕಾ ಸಿಂಗ್, ಪ್ರಸನ್ನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತಲೂ ಪ್ರಸನ್ನ ದೂರು ನೀಡಿದ್ದಾರೆ. ಸಿನಿಮಾ ಮಂದಿಗೆ ಅಷ್ಟೆಲ್ಲಾ ಸಂಭಾವನೆ ಬರುತ್ತಿದ್ದರೂ ಬಾಡಿಗೆ ಕಟ್ಟದೇ ಸಬೂಬು ಹೇಳುತ್ತಾರೆಂದರೆ ನಾಚಿಕೆಗೇಡಿನ ಸಂಗತಿ. ಈ ಹಿಂದೆ ಯಶ್ ಅವರ ಮೇಲೂ ಬಾಡಿಗೆ ಕಟ್ಟದ ಆರೋಪವೂ ಕೇಳಿಬಂದಿತ್ತು. ಹೈ ಕೋರ್ಟ್ ಯಶ್ ಅವರಿಗೆ ಮನೆ ಖಾಲಿ ಮಾಡಲು ಗಡುವನ್ನು ನೀಡಿದೆ.
No Comment! Be the first one.