ರವಿ ಬೆಳೆಗೆರೆ ಅಳಿಯ ಶ್ರೀನಗರ ಕಿಟ್ಟಿ ಬಿಗ್ ಸ್ಕ್ರೀನ್ ನಿಂದ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದಾರೆ. ವಿಶ್ವಾಸಾರ್ಹ ಜನಮೆಚ್ಚುಗೆಯ ಕನ್ನಡ ವಾಹಿನಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಜೀವನದಿ ಧಾರಾವಾಹಿಯಲ್ಲಿ ಅತಿಥಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಕಿಟ್ಟಿಅಭಿನಯದ ಸಂಚಿಕೆ ಪ್ರಸಾರವಾಗಲಿದೆ.

ಸರಸ್ವತಿ ನಟರಾಜನ್‍ ಅವರ ಕಾದಂಬರಿ ಆಧರಿಸಿ ಜೀವನದಿ ಧಾರಾವಾಹಿ ನಿರ್ಮಿಸಲಾಗುತ್ತಿದ್ದು ಈಗಾಗಲೇ 560 ಸಂಚಿಕೆಗಳು ಪ್ರಸಾರವಾಗಿ ಕನ್ನಡದ ಕಿರುತೆರೆ ವೀಕ್ಷಕರನ್ನು ಸೆಳೆದಿದೆ. ಈಗ ವಿಶೇಷ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟ ಶ್ರೀನಗರ ಕಿಟ್ಟಿಯವರನ್ನುಕರೆಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಜೀವನದಿ ಹೊರಟಿದೆ. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ತನಗೆ ಎದುರಾಗುವ ಕಷ್ಟಗಳನ್ನು ಹೇಗೆಲ್ಲ ಹಿಮ್ಮೆಟ್ಟಿಸಬಹುದು? ಕುಗ್ಗುದೇ ಜಗ್ಗದೇ ಮುನ್ನುಗ್ಗಬಹುದು ಎಂಬುದನ್ನು ವಕೀಲೆ ಜ್ಯೋತಿ ಪಾತ್ರದ ಮೂಲಕ ಜೀವನದಿ ನಿರೂಪಿಸುತ್ತದೆ. ವಿನಯ್, ಅರ್ಚನಾ, ನದಾಫ್ ಮುಖ್ಯ ಭೂಮಿಕೆಯಲ್ಲಿದ್ದು, ಮೀಡಿಯಾ ಹೌಸ್ ಮತ್ತು ಸಂಗಮ ಫಿಲ್ಮ್ಸ್ ಈ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಸೈಯದ್ ಆಶ್ರಫ್ ಜೀವನದಿಯನ್ನು ನಿರ್ದೇಶನ ಮಾಡುತ್ತಿದ್ದಾರೆ.

CG ARUN

ಜರ್ಮನಿಯಲ್ಲಿ ಅಬ್ಬರಿಸುತ್ತಿದೆ ಕನ್ನಡದ ಟಗರು!

Previous article

ಕಣ್ಸನ್ನೆ ಚೆಲುವೆಯ ಕಿಸ್ಸಿಂಗ್ ಪ್ರಾಂಕ್ ವಿಡಿಯೋ!

Next article

You may also like

Comments

Leave a reply

Your email address will not be published. Required fields are marked *