ಈ ವಾರ ತೆರೆ ಕಂಡಿರುವ ಸರಿಸುಮಾರು ಮುಕ್ಕಾಲು ಡಜನ್ ಸಿನಿಮಾಗಳಲ್ಲಿ ‘ಲುಂಗಿ ಅನ್ನೋ ಚಿತ್ರ ಕೂಡಾ ಸೇರಿಕೊಂಡಿದೆ.
ಅರ್ಜುನ್ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ಎಂಬಿಬ್ಬರು ನಿರ್ದೇಶಕರು ಸೇರಿ ಕಟ್ಟಿರುವ ‘ಲುಂಗಿ ಶೀರ್ಷಿಕೆಯ ಕಾರಣಕ್ಕಷ್ಟೇ ಕುತೂಹಲ ಹುಟ್ಟಿಸಿದ್ದ ಚಿತ್ರ.
ಎಂನಿಜಿಯರಿಂಗ್ ಪದವಿ ಪಡೆದು ಪರದಾಡುತ್ತಿರುವ ಅಸಂಖ್ಯಾತ ಯುವಕರ ಬದುಕಿಗೆ ಕನ್ನಡಿ ಹಿಡಿಯುಂತಾ ಕಥೆ ಈ ಚಿತ್ರದಲ್ಲಿದೆ. ಮಗನನ್ನು ಇಂಜಿನಿಯರ್ ಮಾಡಿಸಿದ್ದೀವಿ, ಆತ ಕೈ ತುಂಬ ದುಡಿದರೆ ಸಾಕು ಅನ್ನೋದು ಹೆತ್ತವರ ಬಯಕೆ. ಈ ದೇಶದಲ್ಲಲ್ಲದಿದ್ದರೂ ಇನ್ನೊಂದು ದೇಶಕ್ಕಾದರೂ ಹೋಗಿ ದುಡಿಮೆ ಮಾಡಲಿ ಎಂದು ಬಯಸುವ ತಂದೆ. ಎಲ್ಲೇ ಆದರೂ ಸರಿ ಮತ್ತೊಬ್ಬರ ಅಡಿಯಲ್ಲಿ ದುಡಿಮೆ ಮಾಡಬಾರದು ಎನ್ನುವ ಅಚಲ ನಿರ್ಧಾರ ಹುಡುಗನದ್ದು. ಈ ನೆಲ-ಸಂಸ್ಕೃತಿಯ ಮೇಲೆ ಅಪಾರ  ಒಲವು ಹೊಂದಿರುವ ಈತ ‘ಯಾಕೆ ನಮ್ಮ ದೇಸೀ ಉಡುಗೆಯಾದ ಲುಂಗಿ ವ್ಯಾಪಾರವನ್ನು ದೊಡ್ಡ ಮಟ್ಟಕ್ಕೆ ಬೆಳೆಸಿ, ವಿಸ್ತರಿಸಬಾರದು ಎನ್ನುವ ಕನಸು ಕಾಣುತ್ತಾನೆ. ಅದು ಸಾಧ್ಯವಾಗಬೇಕೆಂದರೆ, ಅದಕ್ಕೆ ಸೂಕ್ತ ಬಂಡವಾಳ ಬೇಕು. ಲುಂಗಿ ಅಂಗಡಿ ತೆರೆಯಬೇಕು ಅಂತಾ ಮತ್ತೊಬ್ಬರಲ್ಲಿ ಹಣ ಕೇಳಲು ಅಡ್ಡಿಯಾಗುವ ಸ್ವಾಭಿಮಾನ. ಇವೆಲ್ಲದರ ಜೊತೆ ಪಕ್ಕದ ಮನೆ ಹುಡುಗಿಯೊಂದಿಗಿನ ಲವ್ವು…
ಹೀಗೆ ಲುಂಗಿಯಲ್ಲಿ ಒಂದಷ್ಟು ಎಲಿಮೆಂಟುಗಳನ್ನು ಸುತ್ತಿಟ್ಟಿದ್ದಾರೆ ನಿರ್ದೇಶಕದ್ವಯರು. ಇಡೀ ಚಿತ್ರದಲ್ಲಿ ಕರಾವಳಿ ಕನ್ನಡವೇ ಪ್ರಧಾನವಾಗಿರುವುದರಿಂದ ಉಳಿದ ದಿಕ್ಕಿನವರಿಗೆ ಅಷ್ಟು ರುಚಿಸೋದಿಲ್ಲ. ಸಿನಿಮಾದ ಮೂಲ ಆಶಯ ಚೆಂದವಿದ್ದರೂ ಅದನ್ನು ನಿರೂಪಿಸುವಲ್ಲಿ ಅಂತಾ ಗೆಲುವು ಕಂಡಿಲ್ಲ. ಸಾಧು ಕೋಕಿಲ ಮತ್ತು ಸಂಜಿತ್ ಹೆಗ್ಡೆ ಹಾಡುಗಳು ಕೇಳುವಂತಿವೆ. ರಿಜೋ ಜಾನ್ ಇರುವ ಲಿಮಿಟೇಷನ್ನಿನಲ್ಲೇ ಉತ್ತಮ ಛಾಯಾಗ್ರಹಣ ಮಾಡಿದ್ದಾರೆ. ನಟನೆಯಲ್ಲಿ ಪ್ರಣವ್ ಹೆಗಡೆ ಸ್ಕೋರು ಮಾಡುತ್ತಾರೆ. ಪೋಷಕ ಪಾತ್ರಗಳಲ್ಲಿ ಬರುವ ನಟರೂ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಕಥೆಯಲ್ಲಿ ಟ್ವಿಸ್ಟು ಟರ್ನುಗಳು ಇಲ್ಲದೇ ಇರೋದರಿಂದ ಅಂತಾ ಮಜಾ ಕೊಡೋದಿಲ್ಲ. ಮಾಮೂಲಿ ಫಾರ್ಮುಲಾದಿಂದ ಹೊರಗಿದೆ ಅನ್ನೋದಷ್ಟೇ ಈ ಚಿತ್ರದ ಸಾಧನೆ. ಉಳಿದಂತೆ ಲುಂಗಿಯನ್ನು ಇನ್ನೊಂಚೂರು ಬಿಗಿಯಾಗಿ ಕಟ್ಟಿದ್ದಿದ್ದರೆ ಉದುರಿ ಹೋಗುತ್ತದೆ ಎನ್ನುವ ಭಯವಿರುತ್ತಿರಲಿಲ್ಲ!
CG ARUN

ವ್ಯರ್ಥವಾಯ್ತು ವೃತ್ರ!

Previous article

ಸ್ವಿಜರ್ಲ್ಯಾಂಡ್‌ಗೆ ಹೊರಟುನಿಂತ ಒಡೆಯ!

Next article

You may also like

Comments

Leave a reply

Your email address will not be published. Required fields are marked *