ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುದಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಟೈಟಲ್‌ನ್ನು ಲೋಕಾರ್ಪಣೆ ಮಾಡಿದ್ದರು. ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ.
ಪ್ರಚಾರದ ಸಲುವಾಗಿ ಸೋಮವಾರ ಲಿರಿಕಲ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಮದುವೆ ಸಂಭ್ರಮದಲ್ಲಿ ನವ ಜೋಡಿಗಳ ಎದುರು ’ಮಹರೆಜೈಲಾ ಅಲ್ಲಾ ಅಲ್ಲಾ ಎಲ್ಲಾ ಎಲ್ಲಾ’ ಹಾಡಿನಲ್ಲಿ ನಾಯಕ ಮತ್ತು ನಾಯಕಿ ತಂಡದೊಂದಿಗೆ ಹೆಜ್ಜೆ ಹಾಕುವ ಗೀತೆ ಇದಾಗಿದೆ. ಮದನ್ ಕರ್ಕಿ ಸಾಹಿತ್ಯಕ್ಕೆ ಸಂಗೀತ ಸಂಯೋಜಕ ಯುವನ್‌ಶಂಕರ್‌ರಾಜ ಹಾಡಿಗೆ ಧ್ವನಿಯಾಗಿದ್ದು, ಇವರೊಂದಿಗೆ ರಿಜ್ವಾನ್,ರಾಜ ಭವತರಣಿ ಸೇರಿಕೊಂಡಿದ್ದಾರೆ.
ಪೊಲಟಿಕಲ್ ಡ್ರಾಮ ಕತೆ ಹೊಂದಿರುವ ಚಿತ್ರಕ್ಕೆ ರಚನೆ-ನಿರ್ದೇಶನ ವೆಂಕಟ್‌ಪ್ರಭು, ಛಾಯಾಗ್ರಹಣ ರಿಚರ್ಡ್.ಎಂ.ನಾಥನ್, ಸಂಕಲನ ಪ್ರವೀಣ್.ಕೆ.ಎಲ್, ಸಾಹಸ ಸ್ವಂಟ್‌ಶಿವ, ನೃತ್ಯ ರಾಜುಸುಂದರಂ ಅವರದಾಗಿದೆ. ಸುರೇಶ್ ಕಮತ್‌ಚಿ ಅವರು ’ವಿ ಹೌಸ್ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಕಲ್ಯಾಣಿಪ್ರಿಯದರ್ಶನ್ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ಎಸ್.ಜೆ.ಸೂರ್ಯ ಉಳಿದಂತೆ ವೈ.ಜಿ.ಮಹೇಂದ್ರನ್, ವಾಗಿಚಂದ್ರಶೇಖರ್, ಅಂಜನಕೀರ್ತಿ, ಎಸ್.ಎ.ಚಂದ್ರಶೇಖರ್, ಉದಯ, ಮನೋಜ್.ಕೆ.ಭಾರತಿ, ಪ್ರೇಮ್‌ಜಿ ಅಮರೆನ್, ಡ್ಯಾನಿಯೆಲ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.
No Comment! Be the first one.