- ವಿಜಯಭಾಸ್ಕರರೆಡ್ಡಿ, ಸೇಡಂ
ಕಲಬುರಗಿಯ ಖಾರದ ಭಾಷೆಯೊಂದಿಗೆ ಅಗ್ದಿ ದೇಸಿ ಸೊಗಡಿನ ನಟನೆಯ ಜೊತೆಗೆ ಇದೀಗ `ವೆಬ್ ಸೀರಿಸ್’ ಯುಟ್ಯೂಬ್ನಲ್ಲಿ ಅತಿ ಹೆಚ್ಚು ಸುದ್ದಿ ಎಬ್ಬಿಸಿದೆ. ಕಲಬುರಗಿ ಜಿಲ್ಲೆಯ `ಮನೋಮಯ್’ ಎಂಬ ತಂಡವೊಂದು ಸಮಾನ ಮನಸ್ಕರ ಮತ್ತು ವಯಸ್ಕರ ಯುವಕರೊಂದಿಗೆ ಸೇರಿ `ಇಂಜಿನಿಯರಿಂಗ್’ ವ್ಯಾಸಂಗದ ತರಲೆ-ತುಂಟಾಟಗಳನ್ನು ನಡೆಸಿದ, ಮಷ್ಕೇರಿ ಮಾಡಿದ ನೆನಪಿನ ಖಾರ ಕಹಾನಿಯನ್ನು ಸರಾಗವಾದ ಆಡು ಭಾಷೆಯಲ್ಲಿ ಹೇಳುವ ಕಥೆಯ ಸ್ವರೂಪ. ಮೇಲ್ನೋಟಕ್ಕೆ ಟೊಂಕದ ಕೆಳಗಿನ ಮಾತಾಗಿದ್ದರು, ಕನ್ನಡ “ಡಿಯಂ ಬಗ್ಗೆ, ರ್ಯಾಗಿಂಗ್ ಎಂಬ ಬಿರುಗಾಳಿ ಭೂತವನ್ನು, ಹಾಸ್ಟೆಲಿನ ಮಂಗಾಟಗಳನ್ನು ಇಣುಕು ನೋಟವೇ ಈ ‘ಒಗ್ಗರಣೆ’ ವೆಬ್ ಸೀರಿಸ್.
ಮನೋಮಯ್ ತಂಡ ಮತ್ತು ಒಗ್ಗರಣೆ ಸೀರಿಸ್ನ ನಿರ್ದೇಶಕ ವೈಭವ್ ಕೇಸ್ಕರ್ ಯುವಕರ ನಾಡಿ”ಡಿತ ಅರಿಯಲು ಹೊರಟದ್ದು ಈ ಚಿತ್ರೀಕರಣದಲ್ಲಿ ಕಾಣುತ್ತದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಅಮೋಘ ಜೋಶಿ ನಟನೆಯು ಗಮನಕ್ಕೀಡು ಮಾಡಿದೆ. ಸಹನಟನಾದ ಶಿವು ಕಲಶೆಟ್ಟಿಯ ಹಾಸ್ಯ ನಟನೆಯು ಮತ್ತು ಆತನ ಪರಿಪೂರ್ಣ ಒಳಗೊಳ್ಳು”ಕೆಯು ಈ ಸೀರಿಸ್ ನೋಡಿದ ಮೇಲೆ ತಿಳಿಯುತ್ತದೆ.
ಆದರ್ಶ ಗಡಾಳೆ, ನಾಗರಾಜ ದೇಶಪಾಂಡೆ, ಪ್ರೀತಿ, ನಿಖಿತಾ, ಐಶ್ವರ್ಯ, ಚಿತ್ರಾ, ಸಿದ್ಧಾರ್ಥ, ರಶ್ಮಿ, ಓಂಕಾರ್, ಮಹೇಂದ್ರಕರ್, ಭಾಗೇಶ್, ರಾಹುಲ್, ಸಂಜಯ್, ಪವನ್, ಲಕ್ಷ್ಮಿಕಾಂತ್, ಪ್ರೇಮ್ ಕೃಷ್ಣ, ಶರತ್, ಅ”ನಾಶ್, ರ”ಂದ್ರ, ಪ್ರ”ಣ, ಅಂಕೀತ್,ಮೇಘರಾಜ್ ಇವರೆಲ್ಲರ ಶ್ರಮದಿಂದ ಮತ್ತು ಹೊಸತನದ ಐಡಿಯಾಲಜಿ ಮೂಲಕ ‘ಒಗ್ಗರಣೆ’ ಹಾಕಲು ಸಾಧ್ಯವಾತು. ನೀವು ಈ ‘ಒಗ್ಗರಣೆ’ ಘಮವನ್ನು ಒಮ್ಮೆ ಕಣ್ತುಂಬಿಕೊಳ್ಳಿ. ಯುಟ್ಯೂಬ್ನಲ್ಲಿ ‘ಮನೋಮಯ್ ಪ್ರೋಡಕ್ಷನ್’ ಚಾನೆಲ್ಗೆ ಭೇಟಿ ನೀಡಿದರೆ ಸಾಕು..
No Comment! Be the first one.