ತೆಲುಗು ರಿಮೇಕ್ ಅಂಗಮಲೆ ಡೈರೀಸ್ ಮಲಯಾಳಂನಲ್ಲಿ ಫಲಕ್ ನುಮಾ ದಾಸ್ ಆಗಿ ತೆರೆಗೆ ಬರಲಿದೆ. ಈ ಸಿನಿಮಾವನ್ನು ವಿಶ್ವಾಸ್ ಸೇನ್ ನಿರ್ದೇಶನವನ್ನು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಸಿನಿಮಾವು ಪಾತ್ರದಾರಿಗಳನ್ನು ಹಾಗೂ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದೆ.
ಹೌದು ಈ ಸಿನಿಮಾವು ಮೇ 31ಕ್ಕೆ ರಿಲೀಸ್ ಆಗಲಿದ್ದು, ಮಾಸ್ ರೈಡಿಗೆ ರೆಡಿಯಾಗಿ ಎಂಬ ಫೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿವೆ. ಸುರೇಶ್ ಪ್ರೊಡಕ್ಷನ್ ರವರು ಸಿನಿಮಾದ ಥಿಯೇಟರಿಕಲ್ ಬಿಡುಗಡೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಇನ್ನು ಸಲೋನಿ ಮಿಶ್ರಾ ನಾಯಕನ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ತರುಣ್ ಭಾಸ್ಕರ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿದ್ಯಾ ಸಾಗರ್ ಚಿಂತಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
No Comment! Be the first one.