ವಿನಯ್ ಪಂಗೇಟಿರ ನಿರ್ದೇಶನದ ಹೊಸ ಸಿನಿಮಾ ಮಿಸ್ಟರ್ ಜೈ. ಈ ಚಿತ್ರವನ್ನು ಶ್ರೀ ಗಣೇಶ್ ಮೂವೀ ಮೇಕರ್ಸ್ ಲಾಂಛನದಲ್ಲಿ ಶ್ಯಾಮಲಾ. ಕೆ. ಅವರು ನಿರ್ಮಿಸುತ್ತಿದ್ದಾರೆ. ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾ ಹಂದರವನ್ನು ಈ ಚಿತ್ರವು ಹೊಂದಿದ್ದು, ಚೊಚ್ಚಲ ಬಾರಿಗೆ ಜಯಸಿಂಹ ನಾಯಕನಾಗಿ ನಟಿಸುತ್ತಿದ್ದಾರೆ. ಇವರಿಗೆ ರಕ್ಷ ಸೋಮಶೇಖರ್ ನಾಯಕಿಯಾಗಿ ಜತೆಯಾಗಿದ್ದಾರೆ. ಉಳಿದಂತೆ ಬಾಲರಾಜವಾಡಿ, ಕುರಿ ಪ್ರತಾಪ್, ಡ್ಯಾನಿಯಲ್ ಕುಟ್ಟಪ್ಪ, ಯಮುನ ಶ್ರೀನಿಧಿ, ವಿನೋದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈಗಾಗಲೇ ಶ್ರೀರಂಗಪಟ್ಟಣ, ಪಾಂಡವಪುರ, ಬೆಂಗಳೂರು ಮುಂತಾದ ಕಡೆಗಳಲ್ಲಿ 48 ದಿನಗಳ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಮಿಸ್ಟರ್ ಜೈ ಚಿತ್ರಕ್ಕೆ ಶ್ರೀ ಸಾಯಿ ಛಾಯಾಗ್ರಹಣ, ಎಸ್.ಬಿ. ಉದಯ್ ಸಂಕಲನ, ಶಿವಶಂಕರ್ ನೃತ್ಯ ನಿರ್ದೇಶನ, ವಿನೋದ್ ಸಾಹಸ ಸಂಯೋಜನೆ ಇದೆ.