ಮೋಡ ಕವಿದ ನೀಲಿ ಬಾನಿಗೆ ಬಂತು ಕಿರು ಬೆಳಕು, ದಾರಿ ಮರೆತಾ ಒಂಟಿ ಬಾಳಿಗೆ ಈಗ, ಹೊಸ ದಿಕ್ಕು, ಗಡುವು ಪಡೆದು ಚಲಿಸಿತು ಇಂದು ನಿಂತ ಗಡಿಯಾರ, ವಿಧಿಯ ಮುಂದೆ ನಡೆಯದು ಎಂದೂ ಮನಸಿನ ವ್ಯವಹಾರ… ಇಷ್ಟು ಚೆಂದದ ಸಾಲುಗಳನ್ನು ಹೊತ್ತುತಂದಿರುವ ಹಾಡು ನಮ್ ಗಣಿ ಬಿಕಾಂ ಪಾಸ್ ಚಿತ್ರದ್ದು. ಈ ಹಿಂದೆ ನವೀನ್ ಸಜ್ಜು ಹಾಡಿದ್ದ ಯಾಕೋ ಏನೋ ಲೈಫಿನಲ್ಲಿ ಏನೂ ಆಯ್ತಿಲ್ಲ.. ಅನ್ನೋ ಹಾಡು ರಿಲೀಸ್ ಆಗಿತ್ತು. ಈಗ ಯಾರ ಬಾಯಲ್ಲಿ ನೋಡಿದರೂ ಇದೇ ಗೀತೆ ನಲಿದಾಡುತ್ತಿದೆ. ಈಗ ಎರಡನೇ ಹಾಡು ರಿಲೀಸಾಗಿದೆ. ಮೊದಲ ಹಾಡಿಗಿಂತಾ ಬೇರೆಯದ್ದೇ ಬಗೆಯಲ್ಲಿರುವ ಈ ಸಾಂಗು ಕೂಡಾ ಒಂದೇ ಏಟಿಗೆ ಕೇಳುಗರ ಕಿವಿ ತಟ್ಟುತ್ತದೆ. ಇದು ವಿಡಿಯೋ ಸಾಂಗ್ ಆಗಿರುವುದರಿಂದ ಮನಸ್ಸಿಗೂ ಮುಟ್ಟಿ, ಕಣ್ಣುಗಳನ್ನೂ ತಂಪಾಗಿಸುವಂತಿದೆ.
ಬೃಂದಾವನ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಾಗೇಶ್ ಕುಮಾರ್ ಯು.ಎಸ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಯುವ ನಿರ್ದೇಶಕ ಅಭಿಷೇಕ್ ಶೆಟ್ಟಿ ನಿರ್ದೇಶಿಸಿದ್ದಾರೆ. ವಸಿಷ್ಠ ವಿಕಾಸ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಸಾಮ್ರಾಟ್ ನಾಗರಾಜ್ ಛಾಯಾಗ್ರಹಣವಿದೆ.
ಬಿಕಾಂ ಪಾಸ್ ಆಗಿ ಮೂರು ವರ್ಷ ಕಳೆದರೂ ಕೆಲಸ ಸಿಗದ ಯುವಕನೊಬ್ಬ ಬ್ಯುಸಿನೆಸ್ ಮಾಡ್ತೀನಿ ಅಂತಾ ನಿಲ್ಲುವ ಗಣೇಶ ಆಗೋದು ಮದುವೆಯನ್ನು. ಹೀಗೆ ಗಣೇಶನ ಸುತ್ತ ನಡೆಯುವ ಕಥೆ ಈ ಚಿತ್ರದ್ದು. ಈ ಸಿನಿಮಾದಲ್ಲಿ ಐಶಾನಿ ಶೆಟ್ಟಿ, ಪಲ್ಲವಿ ಗೌಡ, ರಚನಾ ದಶರಥ್ ನಾಯಕಿಯರಾಗಿ ನಟಿಸಿರುವ ಈ ಚಿತ್ರದಲ್ಲಿ ಸ್ವತಃ ಅಭಿಷೇಕ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕನಾಗಬೇಕು ಅಂತಾ ಒಂದೊಳ್ಳೆ ಕಥೆ ಮಾಡಿಕೊಂಡು ನಿರ್ಮಾಪಕ ನಾಗೇಶ್ ಕುಮಾರ್ ಅವರ ಬಳಿ ಹೋಗಿ ಕತೆ ಹೇಳಿದಾಗ ಕಥೆ ಚನ್ನಾಗಿದೆ, ನೀನೇ ಹೀರೋ ಕೂಡಾ ಆಗಬೇಕು ಅಂದರಂತೆ. ಆ ಮೂಲಕ ನಾಯಕ ಕಂ ನಿರ್ದೇಶಕನಾಗಿ ನಮ್ ಗಣಿ ಬಿಕಾಂ ಪಾಸ್ ಸಿನಿಮಾವನ್ನು ಆರಂಭಿಸಿದ್ದರು ಅಭಿಷೇಕ್. ಇದೇ ನವೆಂಬರ್ ೧೫ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಮತ್ತು ಹಾಡುಗಳು ಕುತೂಹಲ ಹೆಚ್ಚಿಸಿವೆ…
No Comment! Be the first one.