ಎನ್.ರಾಜ್

ಈ ಹಿಂದೆ ಗವಿಪುರ ಚಿತ್ರದ ಮೂಲಕ ನಾಯಕನಟನಾಗಿ ಎಂಟ್ರಿಕೊಟ್ಟು ಗಾಂಧಿನಗರದ ಮಂದಿಗೆ ಪರಿಚಯವಾಗಿದ್ದವರು ಸೂರಜ್ ಸಾಸ್ನೂರ್. ಸ್ವಲ್ಪ ಗ್ಯಾಪಿನ ಬಳಿಕ ಛೋಟಾ ಬಾಂಬೆ ಎಂಬ ಚಿತ್ರದಲ್ಲಿ ನಾಯಕನಾಗುವ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಇದರ ಸೂತ್ರಧಾರ ಯೂಸುಫ್ ಖಾನ್.. ಮೂಲತಃ ಹುಬ್ಬಳಿಯವರಾಗಿರುವ ಯೂಸುಫ್ ಅವರು ಅಲ್ಲಿ ನಡೆದ, ನೋಡಿದ ನೈಜ ಘಟನೆಯನ್ನು ಸಿನಿಮಾ ರೂಪಕ್ಕೆ ತಂದಿದ್ದಾರೆ. ಹುಬ್ಬಳ್ಳಿಯ ರೌಡಿಸಮ್ಮು ಫೇಮಸ್ಸು. ಕೊಲೆ, ಸುಲಿಗೆ, ಕೋಮುದ್ವೇಷ… ಹೀಗೆ ನಾಮಾ ಮುಖಗಳನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿದ್ದಾರಂತೆ. ಇದರಲ್ಲಿ ಸೂರಜ್ ಭೂಗತ ದೊರೆಯಾಗಿ ಕಾಣಿಸಿಕೊಂಡಿದ್ದಾರೆ. ಶನಾಯ ಇವರಿಗೆ ಜೋಡಿಯಾಗಿದ್ದಾರೆ. ಈಗಾಗಲೇ ಈ ಚಿತ್ರ ಅರ್ಧ ಭಾಗ ಚಿತ್ರೀಕರಣಗೊಂಡಿದೆ. ಇನ್ನುಳಿದ ಚಿತ್ರೀಕರಣ ಮುಗಿಸಲು ಚಿತ್ರತಂಡ ರೆಡಿಯಾಗಿದೆ. ಇದು ಹುಬ್ಬಳಿಯ ಕತೆಯಾಗಿರುವುದರಿಂದ ಅಲ್ಲೇ ಚಿತ್ರೀಕರಣ ಮಾಡಬೇಕು. ಸದ್ಯ ವಿಪರೀತ ಮಳೆಯಾಗುತ್ತಿದ್ದರಿಂದ ಶೂಟಿಂಗ್ ಮಾಡೋದು ಕಷ್ಟ ಸಾಧ್ಯ. ಆದ ಕಾರಣ ಚಿತ್ರತಂಡ ಮಳೆ ನಿಲ್ಲವುದನ್ನೇ ಎದರು ನೋಡುತ್ತಿದೆ….

ಇದರ ನಡುವೆ ಯೂಸುಫ್ ಖಾನ್ ಬಾಲಿವುಡ್ ಚಿತ್ರವೊಂದನ್ನು ಮಾಡಲು ಸಕಲ ಸಿದ್ದತೆ ನಡೆಸಿದ್ದಾರೆ. ಹಾಗೆ ನೋಡಿದರೆ ಯೂಸುಫ್ ಖಾನರಿಗೆ ಬಾಲಿವುಡ್ ಹೊಸದಲ್ಲ. ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಂಕುಶ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ್ದಾರೆ. ಅಂಕುಶ ಚಿತ್ರದ ನಾಯಕ ನಾನಾಪಾಟೇಕರ್ಗೆ ಬಹಳ ಆತ್ಮೀಯರು. ಕಾಫೀರ್, ತನಾಯಿ… ಸೇರಿದಂತೆ ಹಲವಾರು ಟೀವಿ ಸೀರಿಯಲ್ಲುಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹಿಂದಿ, ಉರ್ದು ನಾಟಕಗಳಲ್ಲಿ ದುಡಿದಿದ್ದಾರೆ. ಹೀಗಾಗಿ ಬಾಲಿವುಡ್ ಅಂಗಳ ಇವರಿಗೆ ಚಿರಪರಿಚಿತ. ಕನ್ನಡ ಪ್ರೇಮಕ್ಕಾಗಿ ಇಲ್ಲಿ ನೀ ನನ್ನ ಜೀವ ಎನ್ನುವ ಚಿತ್ರ ನಿರ್ದೇಶನ ಮಾಡಿದ್ದರು. ಛೋಟಾ ಬಾಂಬೆ ಎರಡನೇ ಇವರ ಪ್ರಯತ್ನ… ಛೋಟಾ ಬಾಂಬೆಯಲ್ಲಿ ಸೂರಜ್ ಶ್ರಮ, ಶದ್ದೆ, ಪ್ರತಿಭೆ ನೋಡಿ ತಮ್ಮ ಮುಂದಿನ ಬಾಲಿವುಡ್ ಚಿತ್ರಕ್ಕೂ ಅವರನ್ನು ನಾಯಕನನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲಿಗೆ ಸೂರಜ್ ಗೆ ಅದೃಷ್ಟ ಖುಲಾಯಿಸಿದೆ. ಎರಡನೇ ಸಿನಿಮಾ ಮುಗಿಯೋ ಹೊತ್ತಿಗೆ ಬಾಲಿವುಡ್ ಗೆ ಹೋಗುವ ಅವಕಾಶ ಸಿಕ್ಕಿದ್ದು ಇವರ ಪ್ರತಿಭೆಗೆ ಸಾಕ್ಷಿ. ಅಷ್ಟೇ ಅಲ್ಲದೇ ಕನ್ನಡದಲ್ಲಿಯೇ ಇನ್ನೂ ಮೂರ್ನಾಲ್ಕು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸುವುದು ಪಕ್ಕಾ ಆಗಿದೆ. ಇಷ್ಟರಲ್ಲೇ ಎರಡು ಚಿತ್ರಗಳು ಮುಹೂರ್ತ ಕಾಣಲಿವೆ.

ಬ್ಯಾಕ್ ಟು ಬ್ಯಾಕ್ ಆಫರ್ ಸಿಗುತ್ತಿರೋದರಿಂದ ಸೂಜರ್ ಸಹಜವಾಗಿಯೇ ಸಖತ್ ಥ್ರಿಲ್ ಆಗಿದ್ದಾರೆ. ಬಾಲಿವುಡ್ ಎಂಬುದು ಸಮುದ್ರ, ಅದರಲ್ಲಿ ಈಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ತಯಾರಿಬೇಕು. ಅದನ್ನು ಅರಿತಿರುವ ಸೂರಜ್ ಈಗಾಗಲೇ ವರ್ಕ್ ಔಟ್ ಶುರು ಮಾಡಿದ್ದಾರೆ. ಬಾಡಿ ಹುರಿಗೊಳಿಸಿ ತಮ್ಮ ದೇಹಕ್ಕೆ ಮತ್ತಷ್ಟು ಹೊಳಪು ಕೊಡುತ್ತಿದ್ದಾರೆ. ನಟನೆಯಲ್ಲಿ ಪಳಗಿದ್ದರೂ ಮುಂದಿನ ಪ್ರಾಜೆಕ್ಟ್ ಪಾತ್ರಗಳ ತಪಸ್ಸು ಮಾಡುತ್ತಿದ್ದಾರೆ. ನಾಯಕ ಸೂರಜ್ಗೂ ಸಿನಿಮಾ ರಂಗಕ್ಕೂ ಅವಿನಾಭಾವ ಸಂಬಂಧವಿದೆ. ಸಾಸ್ನೂರ್ ಫ್ಯಾಮಿಲಿಯ ಪಿಲ್ಲರ್ ಬಿ.ಟಿ. ಸಾಸ್ನೂರ್. ಮೂಲತಃ ಧಾರವಾಡದವರು. ಕೆಪಿಎಸ್ ಸಿ ಯಲ್ಲಿ ಆರು ವರ್ಷ ಮೆಂಬರ್ ಆಗಿ ದುಡಿದವರು. ಅವರ ಮಕ್ಕಳು ವಿಜಯ, ಅಜಿತ್, ಮೋಹನ್ ಸಾಸ್ನೂರ್…

ಇವರ ಅಂಕಲ್ ವಿಜಯ ಸಾಸ್ನೂರ್. ಎಡಿಜಿಪಿ ಆಗಿದ್ದವರು. ಜೊತೆಗೆ ಕಾಂದಬರಿಕಾರು. ಇವರ ಒಂಭತ್ತು ಕಾದಂಬರಿಗಳು ಚಿತ್ರಗಳಾಗಿದ್ದು ವಿಶೇಷ. ಧ್ರುವತಾರೆ, ಸವ್ಯಸಾಚಿ, ರಥಸಪ್ತಮಿ, ಮಹಾಪ್ರಚಂಡ, ಜ್ವಾಲಾಮುಖಿ, ಅಜಿತ್, ಶಬ್ದವೇಧಿ… ಹೀಗೆ ಸಾಕಷ್ಟು ಚಿತ್ರಗಳು ವಿಜಯ ಸಾಸ್ನೂರ್ ಕಾಂದಬರಿ ಆಧರಿಸಿದ್ದವು. ಸೂರಜ್ ತಂದೆ ಕೂಡ ನ್ಯಾಯಮೂರ್ತಿಯಾಗಿ ದುಡಿದವರು. ಇನ್ನೊಬ್ಬ ಅಂಕಲ್ ಮೋಹನ್ ಡಿಸಿಯಾಗಿದ್ದವರು, ಒಳ್ಳೆಯ ಸಿಂಗರ್ ಕೂಡ ಹೌದು. ಅಲ್ಲದೇ ಸೂರಜ್ ತಾಯಿ ಕೂಡಾ ವಕೀಲರು. ಅಕ್ಕನೂ ಲಾಯರ್. ಹೀಗೆ ತನ್ನದೇ ಪ್ರತಿಷ್ಠೆ ಹೊಂದಿರುವ ಸಾಸ್ನೂರ್ ಫ್ಯಾಮಿಲಿಯ ಕುಡಿ ಸೂರಜ್ ಸಾಸ್ನೂರ್ ತಮ್ಮ ಫ್ಯಾಮಿಲಿ ಹೊಂದಿರುವ ಗೌರವವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸಿನಿಮಾರಂಗ ಆಯ್ದುಕೊಂಡಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಶುರು ಮಾಡಿದ್ದಾರೆ… ಈ ಧಾರವಾಡ ಹುಡುಗನ ಕೈಯಲ್ಲಿ ಇರುವ ಚಿತ್ರಗಳು ಕೈ ಹಿಡಿದರೆ ಪೇಡ ತಿಂದಷ್ಟೇ ಖುಷಿ ಸಿಗಬಹುದು.

CG ARUN

ಬಿಕಾಂ ಪಾಸ್ ಮಾಡಿದ ಗಣಿಯ ಹಾಡು ನೋಡಿ!

Previous article

ತೆಂಬರೆ ಬೊಟ್ಟುವಾನ!

Next article

You may also like

Comments

Leave a reply

Your email address will not be published. Required fields are marked *