ನಾನಿ ಅಭಿನಯದ ಹೊಸ ಸಿನಿಮಾ ಗ್ಯಾಂಗ್ ಲೀಡರ್ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದ್ದು, ಮನಂ ಖ್ಯಾತಿಯ ವಿಕ್ರಮ್ ಕುಮಾರ್ ಅವರು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.
ಗ್ಯಾಂಗ್ ಲೀಡರ್ ಆಗಸ್ಟ್ 30ರಂದು ರಿಲೀಸ್ ಮಾಡುವುದಾಗಿಯೂ ದಿನಾಂಕವನ್ನು ಘೋಷಿಸಿದೆ. ಚಿತ್ರದಲ್ಲಿ ಗ್ಯಾಂಗ್ ಲೀಡರ್ ಜತೆಗೆ ಐದು ಜನ ಮಹಿಳಾ ಸದಸ್ಯರಿದ್ದು, ಅಮಾಯಕರನ್ನು ಮೋಸಗೊಳಿಸುವ ತಂತ್ರವನ್ನು ಚಿತ್ರದಲ್ಲಿ ಅದ್ಬುತವಾಗಿ ಹೆಣೆಯಲಾಗಿದ್ದು, ಪ್ರೇಕ್ಷಕರಿಗೆ ಕ್ಯೂರಿಯಾಸಿಟಿ ಜತೆಗೆ ಮನರಂಜನೆಯ ಮಹಾಪೂರವನ್ನು ಹರಿಸಬಹುದಾಗಿದೆ. ಗ್ಯಾಂಗ್ ಲೀಡರ್ ನಲ್ಲಿ ಆರ್.ಎಕ್ಸ್ 100 ಸಿನಿಮಾದಲ್ಲಿ ನಟಿಸಿರುವ ಕಾರ್ತಿಕೇಯನ್, ಪ್ರಿಯಾಂಕ, ಲಕ್ಷ್ಮೀ, ಸರಣ್ಯ, ಅನೀಶ್ ಕುರುವಿಲ್ಲಾ, ಪ್ರಿಯದರ್ಶಿ, ರಘುಬಾಬು, ವೆನ್ನೆಲಾ ಕಿಶೋರ್, ಜೈಜಾ ಮತ್ತು ಸತ್ಯ ತಾರಾಂಗಣದಲ್ಲಿದ್ದಾರೆ. ಇನ್ನು ಗ್ಯಾಂಗ್ ಲಿಡರ್ ಗೆ ಅನಿರುದ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
No Comment! Be the first one.