ಅನಾರೋಗ್ಯಕ್ಕಾಗಿ ಆಸ್ಪತ್ರೆಗೆ ದಾಖಲಾದ ಪ್ರಸಿದ್ಧ ಬರಹಗಾರ-ನಿರ್ದೇಶಕ ಕೆ.ನಂಜುಂಡ ನಿನ್ನೆ ಬೆಂಗಳೂರಿನಲ್ಲಿ ನಿಧನರಾದರು.
ಕೆ.ನಂಜುಂಡ ಅವರು 90 ರ ದಶಕದಲ್ಲಿ ಕನ್ನಡ ಚಲನಚಿತ್ರೋದ್ಯಮಕ್ಕೆ ಬಂದವರು. ಸಹಾಯಕ ನಿರ್ದೇಶಕರಾಗಿ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರು ‘ಸರ್ವರ್ ಸೋಮಣ್ಣ’, ‘ಪೊಲೀಸ್ ಪವರ್’, ‘ಓ ಮಲ್ಲಿಗೆ, ‘ಮಾಂಗಲ್ಯಂ ತಂತು ನಾನೇನ’ ಮುಂತಾದ ಹಿಟ್ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದರು. ಅಲ್ಲದೇ ಅವರು 1998 ರಲ್ಲಿ ಬಿಡುಗಡೆಯಾದ ‘ಕನಸಲೂ ನೀನೆ ಮನಸಲೂ ನೀನೆ’ ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾಗಿದ್ದರು. ಆದಾಗ್ಯೂ, ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟೇನೂ ದಾಖಲೆ ಬರೆಯಲಿಲ್ಲ. ನಂತರ ನಂಜುಡ ಅವರು ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಬರೋಬ್ಬರಿ 14 ವರ್ಷ ತೆಗೆದುಕೊಂಡರು. ‘ಕನಸಲೂ ನೀನೆ ಮನಸಲೂ ನೀನೆ’ ನಂತರ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಮೆಲೋಡಿ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶಿಸಿದರು.
‘ಮೆಲೋಡಿ’ ನಂತರ, ನಂಜುಂಡ ಅವರು ಕಳೆದ ಕೆಲವು ವರ್ಷಗಳಿಂದ ಬಹುತೇಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಸುಮಾರು ದಿನಗಳಿಂದ ಆಸ್ಪತ್ರೆಯಲ್ಲಿದ್ದ ನಂಜುಂಡ ಅವರು ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲೆಂದು ಭಗವಂತನನ್ನು ಪ್ರಾರ್ಥಿಸೋಣ.
No Comment! Be the first one.