ಕಿಶೋರ್ ಹಾಗೂ ಪ್ರಿಯಾಮಣಿ ಜತೆಯಾಗಿ ನಟಿಸುತ್ತಿರುವ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರದ ಬಹುನಿರೀಕ್ಷಿತ ಸಿನಿಮಾ ನನ್ನ ಪ್ರಕಾರ. ಆಗಸ್ಟ್ 23ಕ್ಕೆ ಬಿಡುಗಡೆಗೆ ರೆಡಿಯಾಗಿರುವ ನನ್ನ ಪ್ರಕಾರ ಅದಕ್ಕೂ ಮುನ್ನ ನಾಳೆ ಸಂಜೆ 5 ಗಂಟೆಗೆ ಜೀ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಟೈಟಲ್ ಟ್ರ್ಯಾಕ್ ನ್ನು ಬಿಡುಗಡೆ ಮಾಡಲಿದೆ.
ಈ ಹಾಡು ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಬರಲಿದ್ದು, ಕ್ಲೈಮ್ಯಾಕ್ಸ್ ಗೆ ಸಮೀಪದಲ್ಲಿದೆ. ಸಿನಿಮಾ ನೋಡಿ ಸ್ವಲ್ಪ ಸಾಕಷ್ಟು ಕೌತುಕದಲ್ಲಿರುವ ಪ್ರೇಕ್ಷಕರಿಗೆ ಸಸ್ಪೆಕ್ಟೀವ್ ಯಾರು ಎಂಬುದಕ್ಕೆ ಈ ಹಾಡು ಹಿಂಟ್ ನೀಡುತ್ತದೆಯಂತೆ. ಇನ್ನು ಟೈಟಲ್ ಟ್ರ್ಯಾಕಿನ ಸಾಹಿತ್ಯವನ್ನು ಚೇತನ್ ಸಾಕಷ್ಟು ಹೋಮ್ ವರ್ಕ್ ಮಾಡಿ ಬರೆದಿದ್ದು, ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಬರೆದಿದ್ದಾರಂತೆ. ಈ ಹಾಡಿನ ಸಾಹಿತ್ಯ ನಡೆದಿರುವ ಅಪರಾಧದ ಕರಾಳ ಮುಖವನ್ನು ಪ್ರತಿಬಿಂಬಿಸುವುದರಿಂದ ಅದಕ್ಕೆ ತಕ್ಕುದಾದ ಬೇಸ್ ವಾಯ್ಸ್ ಹುಡುಕಾಟದಲ್ಲಿ ಚಿತ್ರತಂಡವಿತ್ತು. ಆಗ ವಿಕ್ರಮ್ ವೇದ ಟೈಟಲ್ ಟ್ರ್ಯಾಕ್ ನ್ನು ಕೇಳಿ ನಮ್ಮ ಹಾಡಿಗೆ ಇವರೇ ಸೂಕ್ತವಾಗಿದ್ದಾರೆ ಎಂದು ನಿರ್ಧರಿಸಿ ಶಿವಂ ಅವರನ್ನು ಭೇಟಿಯಾಗಿ ಮಾತನಾಡಿ, ಆಯ್ಕೆ ಮಾಡಿ ಅವರಿಗೆ ಕನ್ನಡವನ್ನು ಕಲಿಸಿ ಹಾಡಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ವಿನಯ್ ಬಾಲಾಜಿ. ಈ ಚಿತ್ರಕ್ಕೆ ಹುಲಿರಾಯ ಖ್ಯಾತಿಯ ಅರ್ಜುನ್ ರಾಮ್ ಸಂಗೀತ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಹೊತ್ತಿದ್ದಾರೆ.