ವಾರಕ್ಕೆ ಮುಂಚೆ ಮೆಹಬೂಬ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ಸನ್ ಎರಡು ಸಾವಿರದ ಇಪ್ಪತ್ತನೇ ಮಾಹೆಯಲ್ಲಿ ಶುರುವಾಗಿ ವರ್ಷಾಂತರಗಳ ನಂತರ ಬಿಡುಗಡೆಗೊಂಡ ಚಿತ್ರವಿದು. ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋನಲ್ಲಿ ಗೆದ್ದ ಸ್ಪರ್ಧಿಗಳು ಆರಂಭದಲ್ಲಿ ಶ್ಯಾನೆ ಟಾಪಲ್ಲಿ ಕುಂತಿರುತ್ತಾರೆ. ಶಶಿ ಎನ್ನುವ ಹುಡುಗ ಕೂಡಾ ಬಿಗ್ ಬಾಸ್ ಶೋ ವಿನ್ನರ್ ಆಗಿದ್ದವರು. ನೀರ್ ದೋಸೆ ಖ್ಯಾತಿಯ ಸ್ಕಂದ ಪ್ರಸನ್ನ ನಿರ್ಮಾಣದಲ್ಲಿ ಆರಂಭಗೊಂಡಿದ್ದ ಸಿನಿಮಾ ಮೆಹಬೂಬ. ಈ ಪಿಚ್ಚರ್ ತಯಾರಾಗೋದು ಕೂಡಾ ತೀರಾ ವಿಳಂಬವಾಯಿತು. ಪ್ರಸನ್ನ ಶುರು ಮಾಡಿದ ಚಿತ್ರಗಳ ಹಣೇಬರಹವೇ ಹೀಗೆ. ಶಿಸ್ತಾಗಿ ಅವು ರೂಪುಗೊಳ್ಳೋದೇ ಇಲ್ಲ. ನಿರ್ದೇಶಕನನ್ನು ಪಕ್ಕಕ್ಕೆ ನಿಲ್ಲಿಸಿ ತಾನೇ ಆಕ್ಷನ್ ಕಟ್ ಹೇಳಲು ನಿಂತುಬಿಡೋ ಪ್ರತಿಭಾವಂತ ಪ್ರೊಡ್ಯೂಸರ್ ಇವರು. ಮೆಹಬೂಬ ವಿಚಾರದಲ್ಲೂ ಹಾಗೇ ಆಯ್ತು.
ಅಡಿಗಡಿಗೂ ತಡವರಿಸಿಕೊಂಡು, ತಡವಾಗಿ ಬಂದ ಈ ಫಿಲಮ್ಮು ಯಾಕೋ ಹೇಳಿಕೊಳ್ಳುವ ಮಟ್ಟಕ್ಕೆ ಮೂಡಿಬಂದಿಲ್ಲ. ಈ ಚಿತ್ರವನ್ನು ನಿರ್ದೇಶಿಸಿದ್ದ ಅನೂಪ್ ಆಂಟನಿ ಈ ಹಿಂದೆ ಕಥಾವಿಚಿತ್ರ ಎನ್ನುವ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಆ ಸಿನಿಮಾವನ್ನು ನೋಡಿದ ಎಲ್ಲರೂ ಮೆಚ್ಚಿದ್ದರು. ಮೊದಲ ಪ್ರಯತ್ನದಲ್ಲೇ ‘ಗುಡ್ ಡೈರೆಕ್ಟರ್’ ಅನ್ನಿಸಿಕೊಂಡಿದ್ದರು ಅನೂಪ್. ಸದ್ಯ ಕೋಮಲ್ ನಟನೆಯ ಕುಟೀರ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಕೂಡಾ ಇದೇ ಅನೂಪ್. ‘ಇಂಥಾ ಅನೂಪ್ ಆಂಟನಿ ಯಾಕೆ ಮೆಹಬೂಬವನ್ನು ಈ ಥರಾ ಮಾಡಿಟ್ಟಿದ್ದಾರೆ’ ಅನ್ನೋದು ನೋಡಿದವರ ಪ್ರಶ್ನೆ ಮತ್ತು ಪ್ರತಿಕ್ರಿಯೆಯಾಗಿದೆ. “ಹಿಂಗ್ಯಾಕಾಯ್ತು” ಅಂತಾ ಹುಡುಕಿದರೆ ಬೇರೆಯದ್ದೇ ವಿಚಾರಗಳು ಬಯಲಿಗೆ ಬರುತ್ತಿವೆ.
ಅದೇನೆಂದರೆ, ಮೆಹಬೂಬ ಚಿತ್ರದ ಶೂಟಿಂಗು ಮಾಡಿದ ನಿರ್ದೇಶಕ ಅನೂಪ್ ಆಂಟನಿ ಅನ್ನೋದು ನಿಜ. ಆದರೆ ಅದನ್ನು ಟೇಬಲ್ಲಿನಲ್ಲಿ ಕೂತು ರೆಡಿ ಮಾಡಿಸಿದ್ದು ಬೇರೆಯವರಂತೆ. ಈ ಚಿತ್ರದ ಹಿಂದೆ ಕಾಣದಂತೆ ಕೂತು ಕೈಯಾಡಿಸಿರೋದು ಮಫ್ತಿ ಖ್ಯಾತಿಯ ನರ್ತನ್ ಅನ್ನೋದು ಆಶ್ಚರ್ಯವಾದರೂ ನಿಜ. ಮಾಡ್ರನ್ ರೈತ, ಪಾರ್ಟೈಮ್ ನಟ ಶಶಿ ಮತ್ತು ನಿರ್ದೇಶಕ ನರ್ತನ್ ಹಳೆಯ ಸ್ನೇಹಿತರಂತೆ. ಅನೂಪ್ ಆಂಟನಿ ಕೆಲಸದ ಬಗ್ಗೆ ಶಶಿಗೆ ಅದೇನು ಅಸಮಧಾನವಿತ್ತೋ? ಗೊತ್ತಿಲ್ಲ!
ನರ್ತನ್ ಅವರನ್ನು ಕರೆದುಕೊಂಡು ಬಂದು ಕೂರಿಸಿ ಚಿತ್ರೀಕರಣಗೊಂಡಿದ್ದ ಪೂರ್ತಿ ಸಿನಿಮಾವನ್ನು ಎಡಿಟಿಂಗ್ ಟೇಬಲ್ಲಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಇರ್ದೇಶಕನಾಗಿ ಅನೂಪ್ಗಿಂತಾ ನರ್ತನ್ ಹೆಸರು ಮಾಡಿರಬಹುದು. ಮಲ್ಟಿಸ್ಟಾರ್ ಸಿನಿಮಾವನ್ನೂ ಮಾಡಿರಬಹುದು. ಆದರೆ, ಒಬ್ಬ ನಿರ್ದೇಶಕನ ಕಲಾಕೃತಿಯನ್ನು ಮತ್ತೊಬ್ಬ ಬಂದು ತಿದ್ದಲು ಸಾಧ್ಯವೇ ಇಲ್ಲ. ಹಾಗೆ ನಡೆದ ಎಷ್ಟೊಂದು ಪ್ರಯೋಗಗಳು ವಿಫಲವಾಗಿವೆ. ಇಲ್ಲಿ ಮೆಹಬೂಬಾ ಕೇಸು ಕೂಡಾ ಅದೇ ಆಗಿತ್ತು. ಅನೂಪ್ ಅದೇನೇನು ಐಡಿಯಾ ಇಟ್ಟುಕೊಂಡು ಶೂಟ್ ಮಾಡಿದ್ದರೋ? ನರ್ತನ್ ಕೈಗೆ ಸಿಲುಕಿ ನಜ್ಜುಗುಜ್ಜಾಗಿದೆ.
ಮಫ್ತಿಯಂತಾ ದೊಡ್ಡ ಸಿನಿಮಾ ಮಾಡಿದ್ದರೂ ನರ್ತನ್ ಈ ವರೆಗೂ ಎಲ್ಲೂ ಪ್ರಚಾರ ಪಡೆಯುವ ಪ್ರಯತ್ನ ಮಾಡಿದವರಲ್ಲ. ಅವರಿವರಂತೆ ಬಿಲ್ಡಪ್ ಕೊಟ್ಟವರಲ್ಲ. ಅಕಾರಣ ಯಾವ ಕಾಂಟ್ರವರ್ಸಿಗಳನ್ನೂ ಮೈಮೇಲೆಳೆದುಕೊಂಡಿಲ್ಲ. ಹೀಗಿರುವಾಗ, ಯಾಕೇ ಮೆಹಬೂಬಾಕೆ ವಿಚಾರಕ್ಕೆ ತಲೆ ತೂರಿಸಿದರೋ ಗೊತ್ತಿಲ್ಲ. ಶಶಿ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ನೀವೇ ಅವರಿಗೊಂದು ಸಿನಿಮಾ ಮಾಡಿಕೊಡಬಹುದಿತ್ತಲ್ಲ. ನೀವು ಮಾತ್ರ ದೊಡ್ಡ ಸ್ಟಾರ್ಗಳಿಗೆ ಮಾತ್ರ ಸಿನಿಮಾ ಮಾಡೋದಾ? ಅಥವಾ ಶಶಿಯಂತಾ ಹುಡುಗರನ್ನು ಸ್ಟಾರ್ ಮಾಡುವ ಕೆಪ್ಯಾಸಿಟಿ ನಿಮಗಿಲ್ಲವಾ? ಹೇಳುವಂತವರಾಗಿ ನರ್ತನ್…
No Comment! Be the first one.