ಮಡಮಕ್ಕಿ, ನಂಜುಂಡಿ ಕಲ್ಯಾಣ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ತನುಷ್ ಇದೀಗ ಮಿಸ್ಟರ್ ನಟ್ವರ್ ಲಾಲ್ ಆಗಿ ಬರಲಿದ್ದಾರೆ. ಇವರಿಗೆ ಪಂಚತಂತ್ರ ಖ್ಯಾತಿಯ ಸೋನಲ್ ಮೊಂಥೆರೋ ಜತೆಯಾಗಿದ್ದಾರೆ. ಇದೊಂದು ಥ್ರಿಲ್ಲರ್ ಕಮ್ ಆ್ಯಕ್ಷನ್ ಚಿತ್ರವಾಗಿದ್ದು, ನಾಯಕ ಇಲ್ಲಿ ಜನರಿಗೆ ಮೋಸ ಮಾಡುತ್ತಲೇ ಬದುಕು ಸಾಗಿಸುತ್ತಿರುತ್ತಾನೆ. ಆದರೆ ಆ ಮೋಸದ ಹಣದಿಂದ ನಾಯಕ ಏನು ಮಾಡುತ್ತಾನೆ ಅನ್ನೋದೇ ಮಿಸ್ಟರ್ ನಟ್ವರ್ ಲಾಲ್ ನ ಕಥಾ ಸಾರಾಂಶ. ಈ ಚಿತ್ರವನ್ನು ಲವ ನಿರ್ದೇಶನ ಮಾಡುವ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ವಹಿಸಿರುವುದು ವಿಶೇಷವಾಗಿದೆ.
ಬಾಲಿವುಡ್ ನಲ್ಲಿ 1979ಕ್ಕೆ ಅಮಿತಾಬ್ ಬಚ್ಚನ್ ಅಭಿನಯದ ಮಿಸ್ಟರ್ ನಟ್ವರ್ ಲಾಲ್ ಗೂ ಕನ್ನಡದ ನಟ್ವರ್ ಲಾಲ್ ನಿಗೂ ಬಿಲ್ ಕುಲ್ ಸಂಬಂಧವಿಲ್ಲ. ಚಿತ್ರದ ಕಥೆ ಮತ್ತು ನಾಯಕನ ಪಾತ್ರಕ್ಕಾಗಿ ಈ ಟೈಟಲ್ ಇಟ್ಟಿದ್ದೇವೆ ಎನ್ನುತ್ತಾರೆ ನಿರ್ದೇಶಕ ಲವ.