ಮುಸುರಿ ಕೃಷ್ಣಮೂರ್ತಿಯವರ ಮಗ ಜಯಸಿಂಹ ಮುಸುರಿ ನಿರ್ದೇಶಿಸಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ನಿಗರ್ವ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ವೇಗವಾಗಿಯೇ ಸಾಕಷ್ಟು ಎಲ್ಲ ಕೆಲಸಗಳನ್ನು ಮುಗಿಸುತ್ತ ಬರುತ್ತಿದೆ. ಸದ್ಯ ರೀ ರೆಕಾರ್ಡಿಂಗ್ ಕೆಲಸವನ್ನು ಮುಗಿಸಿಕೊಮಡು ಇದೀಗ 5.1 ಕೆಲಸವನ್ನು ಮಾಡುತ್ತಿದೆ. ನಿಗರ್ವ ತೆರೆಗೆ ಬರಲು ಈಗಾಗಲೇ ದಿನಗಣನೆ ಶುರು ಮಾಡಿದ್ದು, ಸ್ವಲ್ಪದರಲ್ಲಿಯೇ ಎಲ್ಲ ಕೆಲಸಗಳನ್ನು ಮುಗಿಸಿ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ನಿಗರ್ವ ದಲ್ಲಿ ಬುಲೆಟ್ ವಿನು, ಕೃಷ್ಣೇಗೌಡ, ಆರ್ಯನ್ ಸೂರ್ಯ, ಭಾರತಿ ಹೆಗಡೆ ಪ್ರಮುಖ ಪಾತ್ರದಲ್ಲಿದ್ದು, ಉಳಿದಂತೆ ಹರ್ಷಿತ ಗೌಡ, ರಂಜಿತ ರಾವ್, ಅಶ್ವಿನಿ ರಾವ್ ಮುಂತಾದ ಕಲಾವಿದರನ್ನೊಳಗೊಂಡಿದೆ. ಗುರುದತ್ ಮುಸುರಿ ಛಾಯಾಗ್ರಹಣ, ಸಾಹಸ ರತ್ನ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ನಾಗೇಂದ್ರ ಅರಸ್ ಸಂಕಲನ ಈ ಚಿತ್ರಕ್ಕಿದೆ.

CG ARUN

ಅರಂ 2 ಚಿತ್ರಕ್ಕೆ ನಯನಾ ತಾರ ಬದಲಾಗಿ ಸಮಂತಾ!

Previous article

ಸಿಂಗನನ್ನು ಸಿಂಗರಿಸಿದ ಛಾಯಾಗ್ರಾಹಕ ಕಿರಣ್ ಹಂಪಾಪುರ

Next article

You may also like

Comments

Leave a reply

Your email address will not be published. Required fields are marked *