ಅರ್ಬನ್ ಲ್ಯಾಡ್ಸ್ ಆಲ್ಬಮ್, ಶ್ರೀಹರಿಕಥೆ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿರುವ ಸಮೀರ್ ಕುಲಕರ್ಣಿ ನೈಟ್ ಔಟ್ ಸಿನಿಮಾದ ಸಂಗೀತದ ಸಾರಥಿ. ಸೈಕಲಾಜಿಕಲ್ ಥ್ರಿಲ್ಲರ್ ಆದ ಈ ಸಿನಿಮಾ ಸಂಗೀತದಲ್ಲೂ ತನ್ನ ನಾವಿನ್ಯತೆ ಉಳಿಸಿಕೊಂಡಿದೆ ಎನ್ನುತ್ತಾರೆ ಸಮೀರ್.
“ನೈಟ್ ಔಟ್ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಹಿನ್ನೆಲೆಗಾಗಿ ಮೂರು ಬಿಟ್ಗಳನ್ನೂ ಮಾಡಿದ್ದು ಅದೂ ಈ ಚಿತ್ರದ ಇಂಪ್ಯಾಕ್ಟ್ನ್ನ ಮತ್ತಷ್ಟು ಹೆಚ್ಚಿಸಿದೆ. ಲವ್, ಮೆಲೋಡಿ, ಪ್ಯಾತೊ, ಪಾರ್ಟಿ.. ಹೀಗೆ ಕೆಲವು ವೈವಿಧ್ಯಮಯ ಗೀತೆಗಳನ್ನ ಪ್ರಯೋಗ ಮಾಡಿದ್ದೇನೆ. ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ, ತೇಜಸ್ವಿನಿ, ಎಸ್ಐಡಿ ರ್ಯಾಪರ್, ಬಿರಾಜ್ ಕನ್ನಡಿಗ ಮುಂತಾದವರು ಹಾಡುಗಳನ್ನ ಹಾಡಿದ್ದಾರೆ…
ರಾಕೇಶ್ ನನಗೆ ತುಂಬಾ ಹಳೆಯ ಪರಿಚಯ. ಸಂಗೀತದ ಬಗ್ಗೆ ರಾಕೇಶ್ ಅಡಿಗಾಗೆ ಹೀಗೆ ಬೇಕು ಎಂಬ ಸ್ಪಷ್ಟತೆ ಇತ್ತು. ಅದರಂತೇ ಕೆಲಸ ತೆಗೆಸಿಕೊಂಡಿದ್ದಾರೆ. ಅದರಲ್ಲೂ ಅವರಿಗೆ ಡಿಜಿಟಲ್ ಸಂಗೀತವನ್ನೇ ಹೆಚ್ಚಾಗಿ ಬಳಕೆ ಮಾಡಬೇಕು ಎಂಬ ಬಯಕೆಯಿತ್ತು. ಆ ಕಾರಣದಿಂದಾಗಿ ನೈಟ್ಔಟ್ ಸಿನಿಮಾದಲ್ಲಿ ಅದರ ಬಳಕೆಯೇ ಹೆಚ್ಚಿದೆ.
ಗಿಟಾರ್ಸ್, ಫ್ಲೂಟ್ ಮುಂತಾದ ಉಪಕರಣಗಳನ್ನ ಲೈವ್ ಆಗಿ ಬಳಸಿದ್ದೇವೆ. ಸಬ್ಜೆಕ್ಟ್ಗೆ ಏನು ಬೇಕಿತ್ತೋ ಅದು ಕರಾರುವಾಕ್ಕಾಗಿ ನೀಡಿದ್ದೇನೆ. ಓರ್ವ ನಿರ್ದೇಶಕನಾಗಿ ರಾಕೇಶ್ ಮಾಡಿದ ಕೆಲಸ ನನಗೆ ಇಷ್ಟ ಆಯ್ತು. ಎಲ್ಲೂ ಅವರು ’ಇದು ನನ್ನ ಮೊದಲ ಸಿನಿಮಾ’ ಎನ್ನುವಂತೆ ಎಕ್ಸ್ಕ್ಯೂಸ್ ಕೇಳುವುದಿಲ್ಲ. ತಂಡ ಕಟ್ಟಿಕೊಂಡಿದ್ದರಲ್ಲಾಗಲಿ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾಗಲ್ಲಿ ಎಲ್ಲದರಲ್ಲಿಯೂ ಅಚ್ಚುಕಟ್ಟುತನವಿತ್ತು. ಹಾಗಾಗಿ ನೈಟ್ಔಟ್ ಸೊಗಸಾಗಿ ಮೂಡಿ ಬಂದಿದೆ…
ಎಲೆಕ್ಟ್ರಾನಿಕ್ ಮ್ಯೂಸಿಕ್ ಮೇಲೇ ಜಾಸ್ತಿ ಫೋಕಸ್ ಮಾಡುತ್ತೇವೆ ಎಂದಾದಾಗ ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸೂಕ್ಷ್ಮವಾಗಿ ಕೆಲಸ ಮಾಡದೇ ಹೋದರೆ ಅದು ಸಿಂಪಲ್ ಎನ್ನುವ ರೀತಿ ಕೇಳಿಸಿ ಸಪ್ಪೆಯಾಗಿಬಿಡುತ್ತದೆ. ಹಾಗಾಗದಂತೆ ಸಂಗೀತ ಮಾಡಿದ್ದೇನೆ. ಇಲ್ಲಿ ಹಾಡಿಗಿಂತಲೂ ರೀರೆಕಾರ್ಡಿಂಗ್ ಚಾಲೆಂಜಿಂಗ್ ಆಗಿತ್ತು. ಅದೇ ನನ್ನಿಂದ ಜಾಸ್ತಿ ಕೆಲಸ ತೆಗೆಸಿಕೊಂಡಿದೆ. ಪ್ರತೀ ಸೀನ್ಗಳ ಬಿಗಿಯನ್ನ ಇನ್ನಷ್ಟು ಶಾರ್ಪ್ ಮಾಡುವ ಕೆಲಸ ಯಾವತ್ತಿಗೂ ಸವಾಲಿನದ್ದೇ. ಅದನ್ನ ನಾನು ಖುಷಿಯಾಗೇ ಸ್ವೀಕರಿಸಿದೆ. ಫಲಿತಾಂಶ ಹೇಗೆ ಬಂದಿದೆ ಎಂಬುದನ್ನ ಪ್ರೇಕ್ಷಕರು ಹೇಳಬೇಕು..
ಈ ಚಿತ್ರದಲ್ಲಿ ಬಿದ್ಲು ಬಿದ್ಲು ಎಂಬ ಹಾಡೊಂದಿದೆ. ಅದನ್ನ ವಿಜಯ್ ಪ್ರಕಾಶ್ ಹಾಡಿದ್ದಾರೆ. ಅದರ ಸ್ಟ್ರಕ್ಚರ್ ತುಂಬಾ ಬ್ಲೆಂಡ್ ಆದಂಥದ್ದು. ಅದರಲ್ಲಿ ಜಾಸ್ತಿ ಬಳಕೆಯಾಗಿರುವುದೆಂದರೆ ಗಿಟಾರ್. ಹಾಡಿನ ಜೊತೆ, ಹಾಡಿನ ಹಿಂದು ಮುಂದು ಅದರದ್ದೇ ನುಡಿ ಕೇಳಿಬರುತ್ತದೆ. ಹಾಗಾಗಿ ಅದರ ಸೌಂಡಿಂಗ್ ಕೂಡಾ ಬೇರೆ ರೀತಿ ಕೇಳಿಸುತ್ತದೆ. ಈ ರೀತಿ ಏನೋ ಭಿನ್ನ ಪ್ರಯತ್ನ ಮಾಡಿದಾಗ ನಮಗೂ ಕೆಲಸ ತೃಪ್ತಿದಾಯಕ ಅನ್ನಿಸುತ್ತದೆ”
No Comment! Be the first one.