ರಾಧಾ ಕಲ್ಯಾಣ ಧಾರಾವಾಹಿಯ ಮೂಲಕ ರಾಧಿಕೆಯಾಗಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದವರು ಕೃತಿಕಾ ರವೀಂದ್ರ. ಬಿಗ್‍ಬಾಸ್ ಸೀಜನ್ನಿನ ಸ್ಪರ್ಧಿಯೂ ಆಗಿದ್ದ ಕೃತಿಕಾ ಆ ನಂತರ ನಾಯಕಿಯಾಗಿ ಚಿತ್ರರಂಗದಲ್ಲಿ ಮಿಂಚುತ್ತಾರೆಂಬ ನಿರೀಕ್ಷೆಯೇ ಎಲ್ಲರಲ್ಲಿದ್ದದ್ದು ಸುಳ್ಳಲ್ಲ. ಬಿಗ್‍ಬಾಸ್ ಶೋನ ನಂತರದಲ್ಲಿ ಕೃತಿಕಾ ಕೆಂಗುಲಾಬಿ ಮತ್ತು ಯಾರಿಗೆ ಯಾರುಂಟು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆ ನೋಡಿದರೆ ಕೃತಿಕಾ ಹತ್ತಾರು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಬಹುದಿತ್ತು.‌ ಹಾಗಂದ ಮಾತ್ರಕ್ಕೆ ಅವರಿಗೆ ಅವಕಾಶಗಳ ಕೊರತೆ ಕಾಡಿತ್ತೆಂದು ಅಂದುಕೊಳ್ಳುವಂತಿಲ್ಲ. ಆ ಕ್ಷಣಕ್ಕೆ ಮಿರುಗುವಂಥಾ ಆಕರ್ಷಕ ಪಾತ್ರಗಳಲ್ಲಿ ನಟಿಸಬೇಕೆಂಬುದಕ್ಕಿಂತಲೂ, ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಠಾಪಿತವಾಗುವ ಪಾತ್ರಕ್ಕೆ ಜೀವ ತುಂಬಬೇಕೆಂಬುದು ಕೃತಿಕಾರ ತುಡಿತ.

ಆರಂಭ ಕಾಲದಿಂದಲೂ ಸಾಹಿತ್ಯದ ಸಾಂಗತ್ಯ ಹೊಂದಿರೋ ಅವರಿಗೆ ಪುಸ್ತಕಗಳ ಓದು ಬದುಕಿನ ಭಾಗ. ಅಂಥಾ ಓದಿನ ಫಲವಾಗಿ ಬೆಳೆದುಕೊಂಡ ಪ್ರೌಢಿಮೆಯಿಂದಲೇ ಪಾತ್ರಗಳನ್ನೂ ಆಯ್ಕೆ ಮಾಡಿಕೊಳ್ಳೋ ಕೃತಿಕಾ ಆ ವಿಚಾರದಲ್ಲಿ ಚೂಸಿ. ಬಹುಶಃ ಅಂಥಾ ಮನಸ್ಥಿತಿ ಇಲ್ಲದೇ ಹೋಗಿದ್ದಿದ್ದರೆ ಅವರು ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿಯಾಗುತ್ತಿತ್ತೇನೋ… ಕೊರೋನಾ  ಲಾಕ್‌ಡೌನ್‌ ಸಮಯದಲ್ಲೇ ಕೃತಿಕಾ ತನ್ನ ಗೆಳತಿ ಶಿವಾನಿ ಜೊತೆಗೆ ಟಿಕ್‌ಟಾಕ್‌ ಮಾಡಿ ಪೋಸ್ಟ್‌ ಮಾಡುತ್ತಿದ್ದರು ಕೃತಿಕಾ ಎಲ್ಲಿರುತ್ತಾರೋ ಶಿವಾನಿ ಕೂಡಾ ಅಲ್ಲಿರುತ್ತಾರೆ. ಜೋಡಿ ಜೀವದಂತೆ ಬೆಸೆದುಕೊಂಡಿರುವ ಈ ಇಬ್ಬರೂ ಟಿಕ್‌ ಟಾಕ್‌  ನಲ್ಲಿ ಅಟ್ರಾಕ್ಟ್‌  ಮಾಡಿದ ನಂತರ ಈಗ ಆಲ್ಬಂ ಸಾಂಗ್‌ ಮಾಡಿದ್ದಾರೆ. ಶಿವಾನಿ ನಿರ್ದೇಶನದಲ್ಲಿ ಕೃತಿಕಾ ಇಲ್ಲಿ ನಟಿಸಿದ್ದಾರೆ!

ಸಮಾನ ಮನಸ್ಕರು ಸೇರಿ ನಿರ್ಮಿಸಿರುವ ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ವಿನೂತನ ಆಲ್ಬಮ್ ಸಾಂಗ್ ಒಂದನ್ನು ಹೊರತಂದಿದೆ. ಒಲವೇ ಎಂದು ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿರುವ ಈ ಹಾಡು ಸಿನಿಮೀಯ ರೂಪುರೇಷೆಗಳನ್ನು ಹೊಂದಿರುವುದು ಒಂದು ಪ್ರಮುಖ ಆಕರ್ಷಣೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ನಟಿ ಕೃತ್ತಿಕಾ ರವೀಂದ್ರ ಅವರು ನಾಯಕಿಯಾಗಿ ಅಭಿನಯಿಸಿರುವ ಈ ಗೀತೆಯಲ್ಲಿ ವರುಣ್ ಹೆಗಡೆ ಅವರು ನಾಯಕನಾಗಿ ನಟಿಸಿದ್ದಾರೆ.

ಯುವ ನಿರ್ದೇಶಕಿ ನಟಿ M S ಶಿವಾನಿ ಯವರ ಪರಿಕಲ್ಪನೆಗೆ ಗಾಯನ,ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕರಾದ ಡಾ॥ಸುಚೇತನ್ ರಂಗಸ್ವಾಮಿಯವರು. ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಅದ್ಭುತ ಛಾಯಾಗ್ರಹಣವನ್ನು ಮಾಡಿದ್ದಾರೆ. K.G.F ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೋವನ್ನು ಎಡಿಟ್ ಮಾಡಿದ್ದಾರೆ. ಸುಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋಸ್ ಈ ಗೀತೆಯನ್ನು ಸಮರ್ಪಿಸುತ್ತಿದ್ದು ಜನವರಿ 3ರಂದು ಆನಂದ್ ಆಡಿಯೋಸ್ ನ ಎಲ್ಲಾ ಅಂತರ್ಜಾಲ ವೇದಿಕೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಹಲವಾರು ಯೋಜನೆಗಳನ್ನು ನಿರ್ಮಿಸಲು ಮುಂದಾಗಿರುವ ಸುಕೃಶಿ ಸಂಸ್ಥೆಯು ಜನರ ಮನ್ನಣೆ ಹಾಗೂ ಪ್ರೋತ್ಸಾಹವನ್ನ ನಿರೀಕ್ಷಿಸುತ್ತಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಧೂಮಪಾನ ಮದ್ಯಪಾನಕ್ಕಿಂತಾ ಹುಡುಗೀರು ಹಾನಿಕರ!!

Previous article

36 ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣ

Next article

You may also like

Comments

Leave a reply