ಕನ್ನಡದಲ್ಲಿ ಇತ್ತೀಚೆಗೆ ಹೊಸಾ ಪ್ರಯೋಗದ ಚಿತ್ರಗಳು ಚಾಲ್ತಿಯಲ್ಲಿವೆ. ಆ ಸಾಲಿಗೆ ಸಲೀಸಾಗಿ ಸೇರ್ಪಡೆಗೊಳ್ಳುತ್ತಿರೋ ಸಿನಿಮಾ ಒಂದು ಕಥೆ ಹೇಳ್ಲಾ. ಗಿರೀಶ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಅತಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಹೊಸಾ ಅಲೆಯನ್ನೇ ಸೃಷ್ಟಿಸಿದೆ.
ಹಾರರ್ ಕಥೆಗಳತ್ತ ಪ್ರೇಕ್ಷಕರಲ್ಲೊಂದು ಕ್ಯೂರಿಯಾಸಿಟಿ ಇದ್ದೇ ಇರುತ್ತದೆ. ಅದರಲ್ಲಿಯೂ ತುದಿ ಸೀಟಲ್ಲಿಯೂ ಕೂರಲು ಬಿಡದಂಥಾ ಚಿತ್ರವೊಂದು ಬರುತ್ತಿದೆ ಅಂದರೆ ಸಹಜವಾಗಿಯೇ ಕುತೂಹಲ ನೂರ್ಮಡಿಸುತ್ತದೆ. ಅಂಥಾದ್ದೊಂದು ಕ್ರೇಜ್ ಹುಟ್ಟುಹಾಕುವಲ್ಲಿ ಒಂದು ಕಥೆ ಹೇಳ್ಲಾ ಟ್ರೈಲರ್ ಸಫಲವಾಗಿದೆ. ಯಾಕೆಂದರೆ, ಟ್ರೈಲರ್ ಅತ್ಯಾಕರ್ಷಕವಾಗಿ ಮೂಡಿ ಬಂದಿದೆ.
ಇದೊಂದು ಪಕ್ಕಾ ಮನೋರಂಜನಾತ್ಮಕ, ಹಾರರ್ ಸಿನಿಮಾ. ಹಾಗಂತ ಅದು ಅಷ್ಟಕ್ಕೇ ಸೀಮಿತವಾಗಿಲ್ಲ. ಇಲ್ಲಿ ಹೊಸಾ ಪ್ರಯೋಗ, ನವೀನ ತಂತ್ರಜ್ಞಾನಗಳೂ ಅಷ್ಟೇ ಮಹತ್ವದ ಪಾತ್ರ ವಹಿಸಿವೆ. ಒಂದಲ್ಲ ಎರಡಲ್ಲ ಐದು ಕಥೆಗಳನ್ನ ಒಂದು ಚಿತ್ರದ ಮೂಲಕ ಹೇಳಲಾಗಿದೆ. ಸತ್ಯ ಘಟನೆಯಾಧಾರಿತವಾದ ಈ ಐದೂ ಕಥೆಗಳು ಕ್ಲೈಮ್ಯಾಕ್ಸ್ ಹೊತ್ತಿಗೆ ಕನೆಕ್ಟ್ ಆಗುತ್ತವಂತೆ. ಈ ಐದೂ ಕಥೆಗಳೂ ಕೂಡಾ ಬೇರೆ ಬೇರೆ ಥರದವುಗಳು. ಸೈನ್ಸ್ ಬೇಸ್ಡ್ ಕಥೆಯೂ ಇದೆ. ಮೂಡನಂಬಿಕೆಗಳ ಸುತ್ತ ಗಿರಕಿ ಹೊಡೆಯೋ ಕಥೆಗಳೂ ಇಲ್ಲಿವೆ.
ಆದರೆ ಎಲ್ಲ ಕಥೆಗಳೂ ಕೂಡಾ ಪ್ರೇಕ್ಷಕರನ್ನು ಆಚೀಚೆ ಕದಲದಂತೆ ಕಟ್ಟಿ ನಿಲ್ಲಿಸೋದು ಗ್ಯಾರೆಂಟಿ ಎಂಬ ಭರವಸೆ ನಿರ್ದೇಶಕರದ್ದು. ಜೋಡಿಹಕ್ಕಿ ಸೀರಿಯಲ್ ನಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಾ ರಾಮಣ್ಣ ಅಂತಲೇ ಖ್ಯಾತರಾಗಿರೋ ತಾಂಡವ್ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಐದೂ ಕಥೆಗಳಲ್ಲಿ ಭರ್ಜರಿ ತಾರಾಗಣವಿದೆ.
https://www.youtube.com/watch?v=M7tyMcLqaeI #
No Comment! Be the first one.