ಯುವ ನಿರ್ದೇಶಕ ವಸಿಷ್ಠ ಬಂಟನೂರು ನಿರ್ದೇಶನದ ಮೊದಲ ಸಿನಿಮಾ ಒನ್ ಲವ್ 2 ಸ್ಟೋರಿ. ಈ ಸಿನಿಮಾ ಇದೇ ತಿಂಗಳ ಹದಿನಾರರಂದು ತೆರೆಗೆ ಬರುತ್ತಿದೆ. ಚಿತ್ರವೊಂದು ತೆರೆಗೆ ಬರೋ ಮುಂಚೆ ‘ಈ ಸಿನಿಮಾನ ನೋಡಲೇಬೇಕು’ ಅಂತಾ ಪ್ರೇಕ್ಷಕರಿಗೆ ಅನ್ನಿಸಲು ಮುಖ್ಯ ಕಾರಣ ಅದರ ಹಾಡುಗಳು. ಈ ನಿಟ್ಟಿನಲ್ಲಿ ಒನ್ ಲವ್ 2 ಸ್ಟೋರಿ ಅಕ್ಷರಶಃ ಗೆಲುವು ಕಂಡಿದೆ. ನಟ ವಸಿಷ್ಠ ಸಿಂಹ ಹಾಡಿದ್ದ ಹ್ಯಾಂಗೋವರ್, ರ‍್ಯಾಪ್ ಸಿಂಗರ್ ಅಲೋಕ್ ಬಾಬು ಹಾಡಿರುವ ನನ್ನ ಮನಸ್ಸಲ್ಲೇನೋ ಶುರುವಾಯ್ತು ಮತ್ತು ಸಿಂಪಲ್ ಸುನಿ ಸಾಹಿತ್ಯಕ್ಕೆ, ಸಂಜಿತ್ ಹೆಗಡೆ ಹಾಡಿರುವ ‘ಮತ್ತೊಂದ್ ಸಲ ಲವ್ ಆಯ್ತಾ’ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. 

ಅದ್ಭುತ ಕಂಠದ, ಪ್ರತಿಭಾವಂತ ನಟನಾಗಿ ಪರಿಚಯವಿದ್ದ ವಸಿಷ್ಠ ಈ ಚಿತ್ರದ ಮೂಲಕ ಗಾಯಕನಾಗಿ ಹೊರಹೊಮ್ಮಿದ್ದಾರೆ. ಮೊದಲ ಹಾಡೇ ಇವರಿಗೆ ಅಪಾರವಾದ ಜನಪ್ರಿಯತೆಯನ್ನೂ ತಂದುಕೊಟ್ಟಿತು. ಇನ್ನು, ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿರುವ ಅಲೋಕ್ ಬಾಬು ಅವರಿಗೆ ‘ಮನಸ್ಸಲ್ಲೇನೋ ಶುರುವಾಯ್ತು’ ಹಾಡು ಬೇರೆಯದ್ದೇ ಮಟ್ಟದ ಗೆಲುವು ತಂದುಕೊಟ್ಟಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಆ ಚಿತ್ರದ ಹಾಡುಗಾರರಿಗೆ ಈ ಮಟ್ಟದ ಜನಪ್ರಿಯತೆ ಬಂದಿದೆಯೆಂದರೆ ಯಾರಿಗಾದರೂ ಖುಷಿಯಾಗದೇ ಇರುತ್ತದಾ? ಅದೂ ಅಲ್ಲದೆ, ಯಾವ ಸಿನಿಮಾದ ಹಾಡುಗಳು ಯುವಕರನ್ನು ಸೆಳೆದಿವೆಯೋ ಆ ಸಿನಿಮಾಗಳೂ ಹಿಟ್ ಆದ ನಿದರ್ಶನಗಳು ಬೇಕಾದಷ್ಟಿವೆ. ಒನ್ ಲವ್ 2 ಸ್ಟೋರಿ ಕೂಡಾ ಈಗ ಅದೇ ಹಾದಿಯಲ್ಲಿದೆ.

ಈ ಚಿತ್ರದಲ್ಲಿ ಎರಡು ಡಿಫರೆಂಟ್ ಲವ್ ಸ್ಟೋರಿಗಳಿವೆ. ಸಂತೋಷ್, ಮಧು ನಾಗ್‌ಗೌಡ, ಪ್ರಕೃತಿ, ವಚನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಿರ್ದೇಶಕನೊಬ್ಬನ ಲೈಫ್ ಸ್ಟೋರಿ ಕೂಡಾ ಈ ಚಿತ್ರದಲ್ಲಿ ಸೇರಿಕೊಂಡಿದೆ. ’ಒನ್ ಲವ್ 2 ಸ್ಟೋರಿ ಸಿನಿಮಾದಲ್ಲಿ ನನ್ನ ಜೀವನದಲ್ಲಿ ಎದುರಾದ ಹಲವು ಸಂಗತಿಗಳಿವೆ. ನಿರ್ದೇಶಕನಾಗಿ ನನ್ನ ಅನುಭವಗಳನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇನೆ. ಡೈರೆಕ್ಟರೊಬ್ಬನ ಕತೆಯೊಂದಿಗೆ ಇನ್ನೊಂದು ಲವ್ ಸ್ಟೋರಿ ಕೂಡಾ ಕತೆಯಲ್ಲಿ ಬೆಸೆದಿದ್ದೇನೆ. ಕತೆ ಸಿಂಪಲ್ ಎನಿಸಿದರೂ, ಅದರ ನಿರೂಪಣಾ ಶೈಲಿ ಪ್ರೇಕ್ಷಕರನ್ನು ರಂಜಿಸಲಿದೆ’ ಎನ್ನುವುದು ನಿರ್ದೇಶಕ ವಸಿಷ್ಠ ಬಂಟನೂರು ಅವರ ಅಭಿಪ್ರಾಯ.

CG ARUN

ಆರ್ಟಿಕಲ್ 15 ತಮಿಳು ರಿಮೇಕ್ ನಲ್ಲಿ ಧನುಷ್!

Previous article

ರಿಮೇಕ್ ಹಕ್ಕಿಗಾಗಿ ಬಾಲಿವುಡ್ ಬ್ರಹ್ಮಾಸ್ತ್ರ

Next article

You may also like

Comments

Leave a reply

Your email address will not be published. Required fields are marked *