ಒಂಟಿತನದಲ್ಲಿ ಉಳಿಯಲಾಗದ ಶ್ರೀಮಂತ ಉದ್ಯಮಿ ತನ್ನ ಮೊದಲ ಹೆಂಡತಿ ಸತ್ತ ಮೇಲೆ ಮತ್ತೊಬ್ಬಳನ್ನು ಮದುವೆಯಾಗುತ್ತಾನೆ. ಆದರೆ ಆತನ ಬಯಕೆ, ಆಸೆ ಆಕಾಂಕ್ಷೆಗೆ ಎರಡನೇ ಹೆಂಡತಿ ಸಾಥ್ ಕೊಡದೇ ಆಕೆ ಬೇರೆಯದೇ ಸ್ಕೆಚ್ ಹಾಕಿರುತ್ತಾಳೆ. ಅವಳ ಒಳ ಮರ್ಮವೇನು? ಆಕೆಯನ್ನು ಯಾರಾದರೂ ಬೇಕಂತಲೇ ಆ ಶ್ರೀಮಂತನ ಬಳಿ ಬಿಟ್ಟಿದ್ದರಾ ಇತ್ಯಾದಿ ಅನುಮಾನಗಳಿಗೆ ಆಪರೇಷನ್ ನಕ್ಷತ್ರ ಉತ್ತರಿಸುತ್ತದೆ.

ಹೆಸರಿಗೆ ತಕ್ಕಂತೆ ಇದು ಸಸ್ಪೆನ್ಸ್ ಥ್ರಿಲ್ಲರ್‌ ಸಿನಿಮಾ. ಒಂದಷ್ಟು ನಂಬಬಹುದಾದ ಹಾಗೂ ನಂಬಲಾಗದ ಮರ್ಡರ್ ಗಳ ಸುತ್ತ ಸಾಗುವ ಸಿನಿಮಾ ಪ್ರೇಕ್ಷಕರ ಕೌತುಕವನ್ನು ಉಳಿಸುವಲ್ಲಿ ಭಾಗಶಃ ಯಶಸ್ವಿಯಾಗಿದೆ.
ಸಿನಿಮಾದ ಮಧ್ಯಂತರದವರೆಗೂ ಯಾವುದೋ ಹಳೇ ಕೌಟುಂಬಿಕ ಧಾರವಾಹಿಯಂತೆ ಕಂಡು ಬಂದರೂ ಚಿತ್ರದ ದ್ವಿತೀಯಾರ್ಧ ಸಿನಿಮಾದ ಟ್ವಿಸ್ಟ್‌ಗಳ ಸರಣಿ ಆರಂಭವಾಗುತ್ತದೆ. ಎಲ್ಲವೂ ಊಹೆಗೆ ನಿಲುಕದ ಲೆಕ್ಕಾಚಾರಗಳೇ ಆಗಿರುವಂತದ್ದೂ ನಿರ್ದೇಶಕರ ಶ್ರಮವನ್ನು ತೋರಿಸುತ್ತದೆ.

ಸಿನಿಮಾ ಕಥೆಯಂತೂ ಸಾಕಷ್ಟು ಸಿನಿಮಾಗಳಲ್ಲಿ ಕಂಡುಬಂದರೂ ಹೊಸಬರ ಸಿನಿಮಾ ಎಂಬುದಷ್ಟನ್ನೇ ಗಮದಲ್ಲಿಟ್ಟುಕೊಂಡು ಸಿನಿಮಾ ಸ್ವೀಕರಿಸುವ ಪರಿಸ್ಥಿತಿ ನೋಡುಗರದ್ದು. ಇನ್ನು ಚಿತ್ರದಲ್ಲಿ ಯಜ್ಞಾಶೆಟ್ಟಿ ಮತ್ತು ಅದಿತಿ ಪ್ರಮುಖ ಆಕರ್ಷಣೆಯಾಗಿದ್ದು, ನಿರೀಕ್ಷೆಗೂ ಮೀರಿದ ನಟನೆ, ನ್ಯಾಯ ಒದಗಿಸಿದ್ದಾರೆನ್ನಬಹುದು. ವೀರ ಸಮರ್ಥ ಸಂಗೀತ, ವಿಜಯ್ ಸಾಹಿತ್ಯ ಚಿತ್ರಕ್ಕೆ ಪೂರಕವಾಗಿದೆ.

CG ARUN

ಪಾಯಲ್ ರೋಹ್ಟಗಿ ಟ್ವಿಟರ್ ಅಕೌಂಟ್ ಬ್ಲಾಕ್ ಮಾಡಿದ ಮುಂಬೈ ಪೊಲೀಸರು!

Previous article

ರಿಫ್ರೆಶ್ ಮೆಂಟಿಗೆ ಹೋದ ಲಾಂಗ್ ಟ್ರಿಪ್ಪು ಯಾನ!

Next article

You may also like

Comments

Leave a reply

Your email address will not be published. Required fields are marked *