ಕೆ. ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಚಿತ್ರ ಪಡ್ಡೆಹುಲಿ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರ ಈಗಾಗಲೇ ಹಾಡುಗಳ ಮೂಲಕ ಎಂಥವರೂ ಅಚ್ಚರಿಗೊಳ್ಳುವಂಥಾ ಕ್ರೇಜ್ ಸೃಷ್ಟಿಸಿದೆ. ಶ್ರೇಯಸ್ ಸಂಪೂರ್ಣ ತಯಾರಿಯೊಂದಿಗೇ ಅಡಿಯಿರಿಸಿರೋದರ ಬಗ್ಗೆ ಬೆರಗು, ಓರ್ವ ಎನರ್ಜಿಟಿಕ್ ಹೀರೋ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಸ್ಪಷ್ಟ ಸೂಚನೆಗಳೆಲ್ಲವೂ ಪಡ್ಡೆಹುಲಿಯ ಸುತ್ತ ಮಿರುತ್ತಿವೆ!
ಇದೆಲ್ಲವೂ ಸಾಧ್ಯವಾಗಿದ್ದು ಒಂದರ ಹಿಂದೊಂದರಂತೆ ಅನಾವರಣಗೊಂಡಿದ್ದ ಚೆಂದದ ಹಾಡುಗಳಿಂದ. ಈಗಾಗಲೇ ಭರತ್ ಬಿಜೆ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಎಲ್ಲ ಹಾಡುಗಳೂ ಹಿಟ್ ಆಗಿವೆ. ಇದೀಗ ಪಿಆರ್ಕೆ ಸಂಸ್ಥೆಯ ಮೂಲಕ ಈ ಎಲ್ಲ ಹಾಡುಗಳ ಜ್ಯೂಕ್ ಬಾಕ್ಸ್ ಅನ್ನು ಅನಾವರಣಗೊಳಿಸಲಾಗಿದೆ. ಈ ಮೂಲಕ ಪಡ್ಡೆಹುಲಿ ಚಿತ್ರದ ಅಷ್ಟೂ ಚೆಂದದ ಹಾಡುಗಳನ್ನು ಒಟ್ಟಾಗಿ ಕೇಳಿಸಿಕೊಳ್ಳುವ ಸದಾವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಒಂದು ಚಿತ್ರದಲ್ಲಿ ಐದಾರು ಹಾಡುಗಳಿರೋದು ಸಾಮಾನ್ಯ. ಕೆಲ ಬಾರಿ ಈ ಸಂಖ್ಯೆ ಇನ್ನೂ ಇಳಿಕೆಯಾಗೋದೂ ಇದೆ. ಆದರೆ, ಪಡ್ಡೆಹುಲಿ ಚಿತ್ರದಲ್ಲಿ ಮಾತ್ರ ಹತ್ತು ಹಾಡುಗಳಿವೆ. ಒಂದಕ್ಕಿಂತ ಒಂದು ಚೆಂದವೆಂಬಂತೆ ಮೂಡಿ ಬಂದಿರೋ ಈ ಹಾಡುಗಳೆಲ್ಲವೂ ಜನಮಾನಸ ಗೆದ್ದಿವೆ. ಇದೀಗ ಬಿಡುಗಡೆಯಾಗಿರೋ ಜ್ಯೂಕ್ ಬಾಕ್ಸ್ ಗೂ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರುತ್ತಿವೆ.
ಎಮ್ ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ. ಚಿತ್ರೀಕರಣದ ಹಂತದಲ್ಲಿಯೇ ನಾಯಕ ಶ್ರೇಯಸ್ ಭರವಸೆ ಹುಟ್ಟಿಸಿ ಬಿಟ್ಟಿದ್ದಾರೆ. ಹಾಡುಗಳಂತೂ ಅವರ ಪೂರ್ವ ತಯಾರಿ, ಶ್ರಮಗಳನ್ನು ಪ್ರತಿಫಲಿಸುವಂತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಶ್ರೇಯಸ್ ಶ್ರಮವನ್ನು ಮೆಚ್ಚಿಕೊಂಡಿದ್ದಾರೆಂದ ಮೇಲೆ ಹೆಚ್ಚೇನು ಹೇಳೋ ಅಗತ್ಯವಿಲ್ಲ. ಇದೀಗ ಬಿಡುಗಡೆಯಾಗಿರೋ ಜ್ಯೂಕ್ ಬಾಕ್ಸ್ ಮೂಲಕ ಪಡ್ಡೆಹುಲಿಯ ಬಗೆಗಿನ ನಿರೀಕ್ಷೆ ನೂರ್ಮಡಿಸೋದಂತೂ ಖಂಡಿತ!
No Comment! Be the first one.