ಕಿಚ್ಚ ಸುದೀಪ್ ಮತ್ತು ಕಿಟ್ಟಪ್ಪ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್. ಈಗಾಗಲೇ ಟೀಸರ್, ಟ್ರೇಲರ್, ಆಡಿಯೋ ಮೂಲಕ ಸದ್ದು ಮಾಡುತ್ತಿರುವ ಪೈಲ್ವಾನ್ ಸೆಪ್ಟೆಂಬರ್ 12ರಂದು ಪ್ಯಾನ್ ಇಂಡಿಯಾ ಬಿಡುಗಡೆಯಾಗುವ ಸಿದ್ಧತೆಯನ್ನು ನಡೆಸುತ್ತಿದೆ. ಅಭಿಮಾನಿಗಳು ಕಿಚ್ಚನ ಜಬರ್ಧಸ್ತ್ ಎಂಟ್ರಿಯನ್ನು ನೋಡಿ ಕಣ್ಣುತುಂಬಿಕೊಳ್ಳಲು ಕಾಯುತ್ತಲೇ ಇದ್ದಾರೆ. ಈಗಾಗಲೇ ಪ್ರೊಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಪೈಲ್ವಾನ್ ಟೀಮ್ ಇತ್ತೀಚಿಗಷ್ಟೇ ಬಾಲಿವುಡ್ ನ ಫೇಮಸ್ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದೆ.
https://twitter.com/KicchaSudeep/status/1165515968656707584
ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಭಾಗವಹಿಸಿದ್ದು, ಈ ಕಾರ್ಯಕ್ರಮದ ಅನುಭವದ ಕುರಿತಾಗಿ ಕಿಚ್ಚ ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ‘ಕಪಿಲ್ ಶರ್ಮಾ ಶೋನಲ್ಲಿ ಪೈಲ್ವಾನ್ ತಂಡ ಅದ್ಭುತ ಸಮಯವನ್ನು ಕಳೆದಿದೆ’ ಎಂದು ಬರೆದುಕೊಂಡಿದ್ದಾರೆ.
No Comment! Be the first one.